ಸುಳ್ಯ ರೋಟರಿ ಕ್ಲಬ್ ವತಿಯಿಂದ ರಕ್ತದಾನ ಶಿಬಿರ….

ಸುಳ್ಯ: ರೋಟರಿ ಕ್ಲಬ್‌, ರೋಟರಿ ಸುಳ್ಯ ಸಿಟಿ ಇನ್ನರ್‌ ವ್ಹೀಲ್‌ ಕ್ಲಬ್‌, ರೋಟರಾಕ್ಟ್ ಕ್ಲಬ್‌, ಐ.ಎಂ.ಎ.ಸುಳ್ಯ, ಕರ್ನಾಟಕ ಜರ್ನಲಿಸ್ಟ್‌ ಯೂನಿಯನ್‌ ಸುಳ್ಯ ಇದರ ಸಂಯುಕ್ತ ಆಶ್ರಯದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಆ.15 ರಂದು ಪುತ್ತೂರು ರೋಟರಿ ಕ್ಯಾಂಪ್ಕೋ ಬ್ಲಡ್‌ ಬ್ಯಾಂಕ್‌ ಮತ್ತು ರೆಡ್‌ ಕ್ರಾಸ್‌ ಸೊಸ್ಥೆಟಿ ಇದರ ಸಹಯೋಗದೊಂದಿಗೆ ಸುಳ್ಯ ರೋಟರಿ ಸಮುದಾಯ ಭವನದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ನಡೆಯಿತು.
ಶಿಬಿರವನ್ನು ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಸುಧಾಕರ ರೈ ಉದ್ಘಾಟಿಸಿದರು. ರೋಟರಿ ಕ್ಲಬ್‌ ಅಧ್ಯಕ್ಷ
ರೊ. ಪ್ರಭಾಕರನ್‌ ನಾಯರ್‌ ಅಧ್ಯಕ್ಷತೆ ವಹಿಸಿದ್ದರು. ಡಾ ರಾಮಚಂದ್ರ ಭಟ್‌ ಕೆ, ರೊ.ಜಿತೇಂದ್ರ ಎನ್‌. ಎ , ಐ.ಎಂ.ಎ.ಸುಳ್ಯ ಡಾ. ಶ್ರೀಕೃಷ್ಣ ಭಟ್, ಕರ್ನಾಟಕ ಜರ್ನಲಿಸ್ಟ್‌ ಯೂನಿಯನ್‌ ಸುಳ್ಯ ಇದರ ಅಧ್ಯಕ್ಷ ಜೆ. ಕೆ. ರೈ, ಪೂಜಾ ಸಂತೋಷ್, ಆನಂದ ಖಂಡಿಗ ಮೊದಲಾದವರು ಉಪಸ್ಥಿತರಿದ್ದರು. ಪ್ರಭಾಕರನ್‌ ನಾಯರ್ ಸ್ವಾಗತಿಸಿ, ಡಾ. ಶ್ರೀಕೃಷ್ಣ ಭಟ್ ವಂದಿಸಿದರು.

Sponsors

Related Articles

Back to top button