ಎಸ್ ಕೆ ಎಸ್ ಎಸ್ ಎಫ್ ಪೇರಡ್ಕ ಗೂನಡ್ಕ ಶಾಖೆ ವತಿಯಿಂದ ಸಮಸ್ತ ಸಮ್ಮೇಳನ ಪ್ರಚಾರಾರ್ಥ ಸೌಹಾರ್ದ ಚಹಾ ಕೂಟ…
ಸುಳ್ಯ: ಎಸ್ ಕೆ ಎಸ್ ಎಸ್ ಎಫ್ ಗೂನಡ್ಕ ಶಾಖೆ ವತಿಯಿಂದ ಗೂನಡ್ಕ ಪೇಟೆಯಲ್ಲಿ ಸಮಸ್ತ ಸಮ್ಮೇಳನ ಪ್ರಯುಕ್ತ ಸೌಹಾರ್ದ ಚಹಾ ಕೂಟವನ್ನು ಆಯೋಜಿಸಲಾಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುನೀರ್ ದಾರಿಮಿ ವಹಿಸಿದರು .ಪೇರಡ್ಕ ಮಸೀದಿ ಖತೀಬರಾದ ಅಹಮದ್ ನಈಂ ಫೈಝಿ ದುವಾ ನೆರವೇರಿಸಿದರು .ವೇದಿಕೆಯಲ್ಲಿ ಕರ್ನಾಟಕ ಸರಕಾರದ ಕಾರ್ಮಿಕ ಕನಿಷ್ಟ ವೇತನ ಸಲಹಾ ಮಂಡಳಿ ಅದ್ಯಕ್ಷರಾದ ಟಿ ಎಂ ಶಹೀದ್ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದರು. ಕಲ್ಲುಗುಂಡಿ ಮಸೀದಿ ಖತೀಬರಾದ ನಾಸಿರ್ ದಾರಿಮಿ ಮಾತನಾಡಿ ಸಮಸ್ತ ಶತಾಬ್ಧಿ ಕಾರ್ಯಕ್ರಮದ ಬಗ್ಗೆ ವಿವರಿಸಿದರು . ಕಾರ್ಯಕ್ರಮದಲ್ಲಿ ಸುಳ್ಯ ನಗರ ಪಂಚಾಯತ್ ಮಾಜಿ ಅದ್ಯಕ್ಷರಾದ ಶಂಸುದ್ದೀನ್, ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅದ್ಯಕ್ಷರಾದ ಜಿ ಕೆ ಹಮೀದ್, ಸಾಜಿದ್ ಐ ಜಿ.ಕಾದರ್ ಕುಂಬಕೊಡ್,ಶಾಕಿರ್ ಮುಸ್ಲಿಯಾರ್,ತಾಜು ಟರ್ಲಿ, ಗೂನಡ್ಕ ಶಾಖೆಯ ಕಾರ್ಯದರ್ಶಿ ಹನೀಪ್ ಮೊಟ್ಟೆಂಗಾರ್,ಪೇರಡ್ಕ ಮಸೀದಿ ಕಾರ್ಯದರ್ಶಿ ಉಸ್ಮಾನ್, ಕಲ್ಲುಗುಂಡಿ ಮಸೀದಿ ಸಹಾಯಕ ಅಧ್ಯಾಪಕ ಸಾಜೀದ್ ಅಝ್ಹರಿ ,ಜಮಾಅತ್ ಕಾರ್ಯದರ್ಶಿ ಇರ್ಶಾದ್ ಬದ್ರಿಯಾ,ಸಾದುಮಾನ್ ತೆಕ್ಕಿಲ್, ಜುರೈದ್ ತೆಕ್ಕಿಲ್,ರಝಾಕ್ ಸೂಪರ್ ಕಲ್ಲುಗುಂಡಿ, ಹಸೈನ್ ದೊಡ್ಡಡ್ಕ, ಅಲ್ತಾಪ್ ,ಖಲೀಲ್ ಸೆಂಟ್ಯಾರ್,ನಸ್ಫಾನ್ ಪೆಲ್ತಡ್ಕ,ಜುನೈದ್ ,ಸಪ್ವಾನ್ ,ಮುಂತಾದವರು ಉಪಸ್ಥಿತಿರಿದ್ದರು.ಸುಳ್ಯ ವಲಯ ಎಸ್ ಕೆ ಎಸ್ ಎಸ್ ಎಫ್ ಸಂಘಟನಾ ಕಾರ್ಯದರ್ಶಿ ಕಾದರ್ ಮೊಟ್ಟೆಂಗಾರ್ ಸ್ವಾಗತಿಸಿ, ವಂದಿಸಿದರು.






