ಸಹಕಾರಿ ಸಂಘಗಳಲ್ಲಿ ಜಾತಿ ಮತ ಭೇದ ರಹಿತ ಸೇವೆ-ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ…
ಬಂಟ್ವಾಳ ನ.4:ಸಹಕಾರಿ ಸಂಘಗಳಲ್ಲಿ ಜಾತಿ ಮತ ಭೇದ ರಹಿತವಾಗಿ ಉತ್ತಮ ಸೇವೆ ಸಿಗುತ್ತದೆ. ಯಾವುದೇ ತಾರತಮ್ಯ ವಿಲ್ಲದೆ ಎಲ್ಲರನ್ನು ಸಮಾನ ಗೌರವದಿಂದ ಎಲ್ಲರನ್ನು ನೋಡಿಕೊಳ್ಳುತ್ತಾರೆ. ಆರ್ಥಿಕ ಅಭಿವೃದ್ಧಿಯೊಂದಿಗೆ ಸಾಂಸ್ಕೃತಿಕವಾಗಿ ಸಾಮರಸ್ಯ ಮೂಡಿಸುವ ಕೆಲಸ ಸಹಕಾರಿ ಸಂಘಗಳಿಂದ ನಿರಂತರವಾಗಿ ನಡೆಯಬೇಕು ಎಂದು ಶ್ರೀಧಾಮ ಮಾಣಿಲ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಅವರು ಬಂಟ್ವಾಳ ಸಾರ್ವಜನಿಕ ಉದ್ಯೋಗಸ್ಥ ಸಹಕಾರ ಸಂಘದ 3ನೇ ನೂತನ ಶಾಖೆಯನ್ನು ಉದ್ಘಾಟಿಸಿ ಸಮಾರಂಭದಲ್ಲಿ ಆರ್ಶಿವಚನ ನೀಡಿದರು.
ಗಣಕೀಕರಣ ಯಂತ್ರವನ್ನು ಶೋಕಮಾತೆ ದೇವಾಲಯ ವಿಟ್ಲದ ರೆ/ಫಾ ಐವನ್ ಮೈಕಲ್ ರೊಡ್ರಿಗಸ್ ಉದ್ಘಾಟಿಸಿ ಶುಭ ಹಾರೈಸಿದರು.
ಮಂಗಳಪದವಿನ ನೂತನ ಶಾಖೆಯಲ್ಲಿ ಭದ್ರತಾ ಕೊಠಡಿಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಉದ್ಘಾಟಿಸಿ ಮಾತನಾಡಿದರು. ಆಡಳಿತ ಮಂಡಳಿ ಕೊಠಡಿಯನ್ನು ಮಾಜಿ ಸಚಿವ ರಮಾನಾಥ ರೈ ಉದ್ಘಾಟಿಸಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಮಂಗಳಪದವು ಗಣೇಶೊತ್ಸವ ಸಮಿತಿ ಅಧ್ಯಕ್ಷ ಮಹಾಲಿಂಗ ಭಟ್ ಉಗ್ಗಪ್ಪಕೋಡಿ , ರಾಜ್ಯ ಸಹಕಾರಿ ಸಂಸ್ಥೆಗಳ ಒಕ್ಕೂಟದ ಮಾಜಿ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಪುಣಚ , ದ.ಕ. ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಜೈನ್ , ಅಧ್ಯಾಪಕರ ಸಹಕಾರಿ ಸಂಘದ ಅಧ್ಯಕ್ಷ ರಮೇಶ್ ನಾಯಕ್ , ಸುಮಂಗಲಾ ಕ್ರೆಡಿಟ್ ಕೋ.ಅಪರೇಟಿವ್ ಸೊಸೈಟಿ ಪಾಣೆಮಂಗಳೂರು ಅಧ್ಯಕ್ಷ ನಾಗೇಶ ಕಲ್ಲಡ್ಕ ,ವೀರಕಂಭ ಗ್ರಾ.ಪಂ. ಸದಸ್ಯ ಅಬ್ದುಲ್ ರಹಿಮಾನ್ , ಅಯ್ಯಪ್ಪ ಸ್ವಾಮಿ ಭಜನಾ ಮಂದಿರ ಮಂಗಳಪದವು ಟ್ರಸ್ಟಿ ರೋಹಿತಾಶ್ವ ಎಮ್., ನೇರಳೆಕಟ್ಟೆ ಸೊಸೈಟಿ ಅಧ್ಯಕ್ಷ ಪುಷ್ಪರಾಜ್ ಚೌಟ ಮಾಣಿ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ಕೆ.ಜಯಂತ ನಾಯಕ್ ಪಾಣೆಮಂಗಳೂರು ಅಧ್ಯಕ್ಷತೆ ವಹಿಸಿದ್ದರು.ಉಪಾಧ್ಯಕ್ಷ ಕೆ.ಎನ್. ಗಂಗಾಧರ ಆಳ್ವ ಅನಂತಾಡಿ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗೀತಾ ವಿ ಹೊಳ್ಳ, ಶಾಖಾಧಿಕಾರಿ ಜೀವನ್ ಎ ಕುಲಾಲ್ ಹಾಗೂ ಎಲ್ಲಾ ನಿರ್ದೇಶಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.