ಜಾರಂದಗುಡ್ಡೆ: ಲಕ್ಷ್ಮೀ ವಿಷ್ಣು ಸೇವಾ ಸಂಘದ ತೃತೀಯ ವಾರ್ಷಿಕೋತ್ಸವ ಸಮಾರಂಭ…

ಧರ್ಮ ಸಾಮರಸ್ಯದಿಂದ ನಾಗರೀಕತೆಯ ಉಳಿವು: ಶ್ರೀಕಾಂತ್ ಶೆಟ್ಟಿ ಕಾರ್ಕಳ...

ಬಂಟ್ವಾಳ :ಧರ್ಮ ಸಾಮರಸ್ಯದ ನೆಲವಾದ ಭಾರತದಲ್ಲಿ ಎಲ್ಲಾ ಧರ್ಮಗಳಿಗೂ ಗೌರವ ಕೊಡುವ ಸಂಸ್ಕೃತಿಯಿಂದ ನಮ್ಮ ದೇಶದಲ್ಲಿ ನಾಗರೀಕತೆ ಬೆಳೆದು ಉಳಿದಿದೆ.ಪ್ರಸ್ತುತ ಕಾಲದಲ್ಲಿ ಜನ ಜೀವನ ಪದ್ಧತಿ ಬದಲಾಗಿದ್ದು ಮಕ್ಕಳಿಗೆ ಸರಿಯಾದ ಸಮಯದಲ್ಲಿ ಸರಿಯಾದ ಸಂಸ್ಕಾರವನ್ನು ಕೊಡುವ ಜವಾಬ್ದಾರಿ ಹೆತ್ತವರ ಮೇಲಿದೆ. ಬಡತನದ ಜೀವನದಿಂದ ಮಾತ್ರ ಉತ್ತಮ ಸಾಧನೆ ಮಾಡಲು ಸಾಧ್ಯ. ಸಂಘಟನೆಗಳು ಸಾಧಕರನ್ನು ಗುರುತಿಸುದರೊಂದಿಗೆ ಬಡವರ ದುರ್ಬಲರಿಗೆ ನೆರವು ನೀಡುವ ಮೂಲಕ ಅವರ ಜೇವನಕ್ಕೆ ಭರವಸೆಯ ಬೆಳಕಾಗಬೇಕು ಎಂದು ಖ್ಯಾತ ವಾಗ್ಮಿ ಲೇಖಕ ಶ್ರೀಕಾಂತ್ ಶೆಟ್ಟಿ ಕಾರ್ಕಳ ಹೇಳಿದರು.

ಅವರು ಲಕ್ಷ್ಮಿ ವಿಷ್ಣು ಸೇವಾ ಸಂಘ ರಿ ಹಾಗೂ ಲಕ್ಷ್ಮಿ ವಿಷ್ಣು ಸೇವಾ ಮಾತೃ ಮಂಡಳಿ ರಿ ಜಾರಂದಗುಡ್ಡೆ ಕಳ್ಳಿಗೆ ಇದರ ತೃತೀಯ ವಾರ್ಷಿಕೋತ್ಸವದ ಪ್ರಯುಕ್ತ ಫೆ. 8ರಂದು ಶನಿವಾರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಮಾಜ ಸೇವಕ ನಾರಾಯಣ ಹೊಳ್ಳ, ಹೊಳ್ಳರಬೈಲುಗುತ್ತು ಮಾತನಾಡಿ, ಸಂಘ ಸಂಸ್ಥೆಯಲ್ಲಿ ತೊಡಗಿಸಿಕೊಳ್ಳುದರಿಂದ ಎಲ್ಲರಿಗೂ ಅವಕಾಶ ಹಾಗೂ ಅನುಭವ ಲಭ್ಯವಾಗುತ್ತದೆ, ಹಿರಿಯರು ಮಾಡಿದ ಪುಣ್ಯ ಕಾರ್ಯದಿಂದ ನಮಗೆ ಸಂತೋಷದ ಜೀವನ ಪ್ರಾಪ್ತಿಯಗಿದೆ,ನಾವು ಕೂಡ ಧರ್ಮದ ಹಾದಿಯಲ್ಲಿ ಸಾಗಬೇಕಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಮಾಜಿ ಪುರಸಭೆ ಅಧ್ಯಕ್ಷ ರಾಮಕೃಷ್ಣ ಆಳ್ವ,,ಕಳ್ಳಿಗೆ ಗ್ರಾ.ಪಂ.ಅಧ್ಯಕ್ಷ ಪುರುಷೋತ್ತಮ ಕೊಟ್ಟಾರಿ, ತಾಲೂಕು ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷ ಸುಪ್ರೀತ್ ಆಳ್ವ, ಸಾಮಾಜಿಕ ಕಾಯಕರ್ತೆ ಪ್ರಿಯಾ ದರಿಬಾಗಿಲು, ಸಮಾಜ ಸೇವಕಿ ಶಶಿಪ್ರಭಾ ಗುತ್ತಬಿತ್ತಿಲು, ಹಿಂದೂ ಮುಖಂಡ ಪ್ರದೀಪ್ ಸರಿಪಲ್ಲ,,ಸಂಘದ ಅಧ್ಯಕ್ಷ ಸುಧೀಂದ್ರ ಆಯೆರೆಗುಡ್ಡೆ,ಮಾತೃ ಮಂಡಳಿಯ ಅಧ್ಯಕ್ಷೆ ನಿಶಾ ಅಶೋಕ್ ಮಾಡಂಗೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾ ಪೋಷಕ ಸದಾಶಿವ ಡಿ ತುಂಬೆ ಹಾಗೂ ಸಮುದಾಯ ಆರೋಗ್ಯ ಅಧಿಕಾರಿ ಲಿನೆಟ್ ಪಿಂಟೊ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಕು| ಧನುಶ್ರೀ ಜಾರಂದಗುಡ್ಡೆ, ಸರಕಾರಿ ಪ್ರೌಢ ಶಾಲೆ, ಅಜ್ಜಿಬೆಟ್ಟು ಕು| ಸಾಕ್ಷಿ ಜಾರಂದಗುಡ್ಡೆ, ಸರಕಾರಿ ಪ್ರೌಢ ಶಾಲೆ, ಅಜ್ಜಿಬೆಟ್ಟು ಇವರಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
ಕಾರ್ಯಕ್ರಮಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಜಿ ಪಂ ಮಾಜಿ ಸದಸ್ಯ ಚಂದ್ರಪ್ರಕಾಶ ಶೆಟ್ಟಿ ತುಂಬೆ, ಹಿಂದೂ ಮುಖಂಡ ಸತ್ಯಜಿತ್ ಸುರತ್ಕಲ್ ಭೇಟಿ ಕೊಟ್ಟು ಶುಭ ಹಾರೈಸಿದರು.
ಜ್ಯೋತಿಷಿ ಅನಿಲ್ ಪಂಡಿತ್, ಇಂಜಿನಿಯರ್ ಡಾ ಆನಂದ ಬಂಜನ್, ಪ್ರಕಾಶ್ ಶೆಟ್ಟಿ ಶ್ರೀ ಶೈಲ, ಜಗದೀಶ ಬಂಗೇರ ನೆತ್ತರಕೆರೆ ಮತ್ತಿತರರು ಇದ್ದರು,
ದೇವಿ ಪ್ರಸಾದ್ ದೇವಂದಬೆಟ್ಟು ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು,ಸುಧೀರ್ ಜಾರಂದ ಗುಡ್ಡೆ ಧನ್ಯವಾದವಿತ್ತು, ದಿನೇಶ್ ಸುವರ್ಣ ರಾಯಿ, ನಿರೂಪಿಸಿದರು.
ಬೆಳಿಗ್ಗೆ ಸಾಮೂಹಿಕ ಶ್ರೀ ಶನಿಪೂಜೆ ನಡೆದು ಮಧ್ಯಾಹ್ನ ಅನ್ನಸಂತರ್ಪಣೆ ಜರುಗಿತು, ರಾತ್ರಿ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ವೈವಿದ್ಯ, ವಿಶ್ವಾಸ್ ಮ್ಯೂಸಿಕಲ್ಸ್ ಮಂಗಳೂರು ಇವರಿಂದ ಸಂಗೀತ ರಸಸಂಜೆ ಹಾಗೂ ಶಾರದಾ ಆರ್ಟ್ಸ್ ಮಂಜೇಶ್ವರ ಇವರ ಅಭಿನಯದ “ಕಥೆ ಎಡ್ಡೆಂಡು” ತುಳು ಹಾಸ್ಯ ನಾಟಕ ಪ್ರದರ್ಶನಗೊಂಡಿತು.

Sponsors

Related Articles

Back to top button