ಸಂಸ್ಕಾರ-ಸಂಸ್ಕೃತಿ ಜೀವನಕ್ಕೆ ಒಂದು ದಿಕ್ಕು ನೀಡುತ್ತದೆ- ಡಾ| ಪ್ರಭಾಕರ್ ಭಟ್….
ಬಂಟ್ವಾಳ: ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸುವುದರೊಂದಿಗೆ ಆಧ್ಯಾತ್ಮಿಕ ಹಾಗೂ ರಾಷ್ಟ್ರ ಚಿಂತನೆಗಳನ್ನೂ ಹೆಚ್ಚಿಸುವುದು ಶ್ರೀರಾಮ ವಿದ್ಯಾಕೇಂದ್ರದ ಕಾರ್ಯವಾಗಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಶ್ರೀ ಡಾ| ಪ್ರಭಾಕರ್ ಭಟ್, ಕಲ್ಲಡ್ಕ ಹೇಳಿದರು.
ಅವರು ಕಲ್ಲಡ್ಕ ಶ್ರೀರಾಮ ಪದವಿಪೂರ್ವ ವಿದ್ಯಾಲಯದ 2019-20ನೇ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ದೀಪಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಆಚರಣೆ ಹಾಗೂ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಬೆಳಕಿನ ಮೂಲಕ ಹಸ್ತಾಂತರಿಸಿ, ಜೀವನದ ಸಾರ್ಥಕತೆಯೆಡೆಗೆ ಸಾಗುವುದೇ “ದೀಪ ಪ್ರದಾನ” ಎಂದು ಹೇಳಿದರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಉಪನ್ಯಾಸಕರಾದ ಹಾಗೂ ಮಹಿಳಾ ಲೈಂಗಿಕ ದೌರ್ಜನ್ಯ ತಡೆ ಸಮಿತಿಯ ಅಧ್ಯಕ್ಷರಾದ ಡಾ| ಭಾರತಿ ಮರವಂತೆ ಇವರು ದೇಶಭಕ್ತಿ ಹಾಗೂ ಸಂಸ್ಕೃತಿಯ ಸಮ್ಮಿಲನ ಶ್ರೀರಾಮ ವಿದ್ಯಾಕೆಂದ್ರ ಎಂದು ಪ್ರಶಂಸಿಸಿದರು. ಪುತ್ತೂರಿನ ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ| ಸಿ.ಕೆ ಮಂಜುನಾಥ್ , ಉಡುಪಿಯ ಬಸ್ರೂರು ಶಾರದಾ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ. ಕನರಾಡಿ ವಾದಿರಾಜ್ ಭಟ್, ಮುಂಬೈಯ ಹೋಟೇಲ್ ಉದ್ಯಮಿಯಾದ ಬೆರ್ಮುಟ್ಟು ಚಂದ್ರಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.
ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷರಾದ ನಾರಾಯಣ ಸೋಮಯಾಜಿ, ಹಿರಿಯರಾದ ಶ್ರೀಮತಿ ಕಮಲಾ ಪ್ರಭಾಕರ್ ಭಟ್, ರಾಘವೇಂದ್ರ ಲಕ್ಕವಳ್ಳಿ, ಖಈಔ ಲಕ್ಕವಳ್ಳಿ, ಚಿಕ್ಕಮಗಳೂರು, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಬೆಂದೂರಿನ ಶಿಕ್ಷಕರಾದ ಗಣಪತಿ ಹೋಬ್ಳಿದಾರ್, ಜಯಾನಂದ ಹೋಬ್ಳಿದಾರ್ ಉದ್ಯಮಿಗಳು ಬೈಂದೂರು, ಜನಾರ್ಧನ ಮುಖೋಪಾಧ್ಯಾಯರು, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಬೈಂದೂರು ಹಾಗೂ ವಿದ್ಯಾ ಕೇಂದ್ರದ ಸಹಸಂಚಾಲಕರಾದ ರಮೇಶ್ ಎನ್ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ವಸಂತ ಬಲ್ಲಾಳ್ ಸ್ವಾಗತಿಸಿದರು. ಪ್ರಥಮ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಪ್ರೇಕ್ಷಾ ವಂದಿಸಿದರು. ಪ್ರಥಮ ವಿಜ್ಞಾನ ವಿಭಾಗದ ವಿದ್ಯಾರ್ಥಿ ಭವನೀಶ್ ನಿರೂಪಿಸಿದರು.