ರಾಮ ವಿದ್ಯಾಕೇಂದ್ರದಲ್ಲಿ ಕೊರೊನೋ ಪರೀಕ್ಷಾ ಶಿಬಿರ…
ಬಂಟ್ವಾಳ: ಶ್ರೀರಾಮ ವಿದ್ಯಾಕೇಂದ್ರದಲ್ಲಿ ಕೊರೊನೋ ಪರೀಕ್ಷಾ ಶಿಬಿರವನ್ನು ನ. 17 ರಂದು ಏರ್ಪಡಿಸಲಾಯಿತು. ಕಾರ್ಯಕ್ರಮವನ್ನು ಸಂಸ್ಥೆಯ ಸಂಚಾಲಕರಾದ ವಸಂತ ಮಾಧವ ಉದ್ಘಾಟಿಸಿದರು. ಬಂಟ್ವಾಳದ ಕಿರಿಯ ಆರೋಗ್ಯ ಸಹಾಯಕರಾದ ವೀರೇಶ್.ಯಂ ಕೋವಿಡ್-19 ವೈರಸ್ ಮತ್ತು ಅದರ ಪರೀಕ್ಷೆಯ ಬಗ್ಗೆ ವಿಸ್ತೃತ ಮಾಹಿತಿ ನೀಡಿದರು. ಕೊರೊನ ಪರೀಕ್ಷೆಯ ಕುರಿತಾಗಿ ಮೊದಲಿಗಿದ್ದ ಆತಂಕ ಭಯ ಈಗ ಕಡಿಮೆಯಾಗಿದೆ, ಕೊರೊನ ತಡೆಗೆ ಮುಂಜಾಗ್ರತಾ ಕ್ರಮವಾಗಿ ವೈರಸ್ ಪರೀಕ್ಷೆಯು ಪರಿಣಾಮಕಾರಿ ಮಾರ್ಗ ಎಂದು ಅವರು ತಿಳಿಸಿದರು. ಎರಡು ದಿನ ನಡೆಯುವ ಈ ಶಿಬಿರದಲ್ಲಿ ಮೊದಲ ದಿನ 120 ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಾರ್ವಜನಿಕರು ಸೌಲಭ್ಯವನ್ನು ಪಡೆದರು. ಕಾರ್ಯಕ್ರಮದಲ್ಲಿ ಪ್ರಯೋಗಶಾಲಾ ತಂತ್ರಜ್ಞಾನ ಸಿಬ್ಬಂದಿ ನಿಖಿಲ್ ಯಂ ಮತ್ತು ಸ್ಥಳೀಯ ಆಶಾ ಕಾರ್ಯಕರ್ತೆಯರಾದ ನೇತ್ರಾವತಿ, ಸುಜಾತ, ಜಯಶ್ರೀ ಉಪಸ್ಥಿತರಿದ್ದರು. ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದ ಪ್ರಾಂಶುಪಾಲ ಕೃಷ್ಣಪ್ರಸಾದ ಕಾಯರ್ ಕಟ್ಟೆ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.