ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಬಂಟವಾಳ ಘಟಕ ಮತ್ತು ಶ್ರೀ ಶಂಕರ ಸೇವಾ ಪ್ರತಿಷ್ಠಾನ ಬಂಟವಾಳ ತಾಲೂಕು ಇದರ ವತಿಯಿಂದ ಸೇವಾ ಕಾರ್ಯಕ್ರಮ…
ಬಂಟ್ವಾಳ: ಕನ್ಯಾನದ ಭಾರತ ಸೇವಾಶ್ರಮದಲ್ಲಿ ಜೂ. 2 ರಂದು ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಬಂಟ್ವಾಳ ತಾಲೂಕು ಘಟಕ ಮತ್ತು ಶ್ರೀ ಶಂಕರ ಸೇವಾ ಪ್ರತಿಷ್ಠಾನದ ಬಂಟ್ವಾಳ ಘಟಕದ ವತಿಯಿಂದ ಜರಗಿದ ಸೇವಾ ಕಾರ್ಯಕ್ರಮವನ್ನು ಶ್ರೀ ಸಚ್ಚಿದಾನಂದ ಭಾರತಿ ಮಹಾಸ್ವಾಮಿಗಳು ಎಡನೀರು ಮಠ ಇವರು ದೀಪ ಬೆಳಗಿಸಿ ಉದ್ಘಾಟಿಸಿ ಅಶೀವರ್ಚನ ಮಾಡಿದರು.
ಸೇವಾಶ್ರಮದ 200 ಮಕ್ಕಳು ಮತ್ತು ಹಿರಿಯರಿಗೆ ರೂಪಾಯಿ 30,000 ಕ್ಕಿಂತ ಹೆಚ್ಚಿನ ಮೌಲ್ಯದ ಸೇವಾ ಸೌಲಭ್ಯವನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಕೇಂದ್ರ ಸಮಿತಿಯ ಗೌರವಾಧ್ಯಕ್ಷ ಪ್ರೊ. ಎ ವಿ ನಾರಾಯಣ, ಅಧ್ಯಕ್ಷ ಕೈಯೂರು ನಾರಾಯಣ ಭಟ್, ಪ್ರಧಾನ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ, ಮುಂಬೈ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥ ಡಾ. ವಸಂತಕುಮಾರ ತಾಳ್ತಜೆ , ಬಂಟ್ವಾಳ ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರದ ಮುಖ್ಯಸ್ಥ ಡಾ. ತುಕಾರಾಮ ಪೂಜಾರಿ, ಸೇವಾಶ್ರಮದ ಅಧ್ಯಕ್ಷರಾದ ಈಶ್ವರ ಭಟ್, ಬಂಟ್ವಾಳ ಘಟಕದ ಅಧ್ಯಕ್ಷ ಸೀತಾರಾಮ್ ಶೆಟ್ಟಿ ಕಾಂತಾಡಿಗುತ್ತು, ಮಹಿಳಾ ವಿಭಾಗದ ಜಿಲ್ಲಾ ಸಂಚಾಲಕಿ ಶ್ರೀಮತಿ ವತ್ಸಲಾ ರಾಜ್ನಿ , ಶಂಕರ ಪ್ರತಿಷ್ಠಾನದ ಸಂಚಾಲಕ ಅನಾರ್ ಕೃಷ್ಣಶರ್ಮ ಉಪಸ್ಥಿತರಿದ್ದರು. ಡಾ. ಮಹಾಲಿಂಗ ಭಟ್ ಬಿಲ್ಲಂಪದವು ಕಾರ್ಯಕ್ರಮ ನಿರೂಪಿಸಿದರು.
ಆಶ್ರಮ ವಾಸಿಗಳಿಗೆ ಪಟ್ಟಾಭಿರಾಮ ಸುಳ್ಯ ಇವರಿಂದ ಮಿಮಿಕ್ರಿ ಮತ್ತು ಶ್ರೀಮತಿ ಉಷಾ ಈಶ್ವರ ಭಟ್ ಬಳಗ ಕಾಸರಗೋಡು ಇವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ಜರಗಿತು. ಅತ್ಯಂತ ಹೃದಯ ಸ್ಪರ್ಶಿಯಾಗಿ ನಡೆದ ಈ ಕಾರ್ಯಕ್ರಮಗಳು ಆಶ್ರಮವಾಸಿಗಳಿಗೆ ಅತ್ಯಂತ ಸಂತಸವನ್ನು ನೀಡಿತು. ಕಾರ್ಯಕ್ರಮದ ಪ್ರಾಯೋಜಕರಿಗೆ ಧನ್ಯತೆಯನ್ನು ಒದಗಿಸಿತು.
ಮಿಮಿಕ್ರಿ ಕಲಾವಿದ ಪಟ್ಟಾಭಿರಾಮ ಸುಳ್ಯ ಇವರನ್ನು ಸೇವಾಶ್ರಮದ ಕಾರ್ಯದರ್ಶಿ ಈಶ್ವರ ಭಟ್ ಗೌರವಿಸಿದರು.