ತೆಕ್ಕಿಲ್ ಮಾದರಿ ಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮ…

ಸುಳ್ಯ: ಅರಣ್ಯ ಇಲಾಖೆ, ಗ್ರಾಮ ಪಂಚಾಯತ್ ಜಂಟಿ ಅಶ್ರಯದಲ್ಲಿ ವನಮಹೋತ್ಸವ ಕಾರ್ಯಕ್ರಮ ತೆಕ್ಕಿಲ್ ಮಾದರಿ ಸಮೂಹ ಸಂಸ್ಥೆಯ ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟನೆ ಮಾಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ವಲಯ ಅರಣ್ಯ ಅಧಿಕಾರಿ ಮಂಜುನಾಥ್ ರವರು ವನಮಹೋತ್ಸವದ ಮಹತ್ವ ಹಾಗೂ ಪರಿಸರ ಜಾಗೃತಿ ಬಗ್ಗೆ ಮಾತನಾಡಿದರು. ವೇದಿಕೆಯಲ್ಲಿ ಸಂಪಾಜೆ ಸಹಕಾರಿ ಸಂಘದ ಅಧ್ಯಕ್ಷರು, ಗ್ರಾಮ ಪಂಚಾಯತ್ ಸದಸ್ಯರಾದ ಸೋಮಶೇಖರ್ ಕೊಯಿಂಗಾಜೆ, ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷರಾದ ಟಿ. ಎಂ. ಶಾಹಿದ್ ತೆಕ್ಕಿಲ್, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಲಿಸ್ಸಿ ಮೊನಾಲಿಸಾ, ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜಾ, ಸದಸ್ಯರುಗಳಾದ ಅಬೂಸಾಲಿ, ಎಸ್. ಕೆ. ಹನೀಫ್, ವಿಮಲಾ ಪ್ರಸಾದ್, ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಉನೈಸ್ ಪೆರಾಜೆ, ತಾಜ್ ಮಹಮ್ಮದ್, ರಹೀಮ್ ಬೀಜದಕಟ್ಟೆ, ಉಮ್ಮರ್ ಹಾಜಿ ,ಹಾರೀಸ್ ಕೆ. ಎಸ್, ಸಾದಿಕ್ ಮಾಸ್ತರ್, ಜಯಾನಂದ ಸಂಪಾಜೆ ಕಾಂತಿ ಬಿ. ಎಸ್, ನೇತ್ರಾವತಿ ಬಂಗ್ಲೆಗುಡ್ಡೆ ,ಉಮೇಶ್ ಕಣಪಿಲ , ಹಾಗು ಶಾಲಾ ಶಿಕ್ಷಕ ವೃ oದ, ಆಡಳಿತ ಮಂಡಳಿ ಸದಸ್ಯರು ಭಾಗವಹಿಸಿದರು. ಅನಿತಾ ಟೀಚರ್ ಸ್ವಾಗತಿಸಿ, ಉಪ ಅರಣ್ಯ ಅಧಿಕಾರಿ ಚಂದ್ರು ವಂದಿಸಿದರು. ಸೌಮ್ಯ ಕಾರ್ಯಕ್ರಮ ನಿರೂಪಿಸಿದರು.

whatsapp image 2023 07 01 at 3.48.52 pm
whatsapp image 2023 07 01 at 3.48.52 pm (1)
whatsapp image 2023 07 01 at 3.48.54 pm
Sponsors

Related Articles

Back to top button