ಸಿ ಎಫ್ ಸಿ ವತಿಯಿಂದ ರಾಜ್ಯ ಕನಿಷ್ಠ ವೇತನ ಮಂಡಳಿ ಅಧ್ಯಕ್ಷರಾಗಿ ಆಯ್ಕೆಯಾದ ಟಿ ಎಂ ಶಹೀದ್ ರವರಿಗೆ ಸನ್ಮಾನ…

ಸುಳ್ಯ: ಕರ್ನಾಟಕ ರಾಜ್ಯ ಕನಿಷ್ಠ ವೇತನ ಮಂಡಳಿ ಅಧ್ಯಕ್ಷರಾಗಿ ಆಯ್ಕೆಯಾಗಿ ಕಲ್ಲುಗುಂಡಿ ಆಗಮಿಸಿದ ಟಿ ಎಂ ಶಹೀದ್ ತೆಕ್ಕಿಲ್ ರವರಿಗೆ ಚಟ್ಟೆಕಲ್ಲು ಫ್ರೆಂಡ್ಸ್ ಕ್ಲಬ್ ವತಿಯಿಂದ ಸೆಪ್ಟೆಂಬರ್ 26ರಂದು ಎಂ ಜೆ ಎಂ ವಠಾರದಲ್ಲಿ ಶಾಲು ಹೊದಿಸಿ ಸನ್ಮಾನಿಸಿ, ಅಭಿನಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಎಂ ಜೆ ಎಂ ಖತೀಬರಾದ ನಾಸಿರ್ ದಾರಿಮಿ, ಉಪಾಧ್ಯಕ್ಷರಾದ ತಾಜ್ ಮುಹಮ್ಮದ್, ಅಶ್ರಫ್ ಕೆ ಎಂ, ಪ್ರಧಾನ ಕಾರ್ಯದರ್ಶಿ ಇರ್ಷಾದ್ ಬದ್ರಿಯಾ, ರಫೀಕ್ ಪ್ರಗತಿ, ರಫೀಕ್ ಕರಾವಳಿ, ಮುನೀರ್ ಕೆ ಎಂ, ಅಶ್ರಫ್ ಹೆಚ್ ಎ, ಸಂಪಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾದ ಹನೀಫ್ ಎಸ್ ಕೆ, ಮಾಜಿ ಅಧ್ಯಕ್ಷರಾದ ಜಿ ಕೆ ಹಮೀದ್ ಗೂನಡ್ಕ, ಸಿ ಎಫ್ ಸಿ ಉಪಾಧ್ಯಕ್ಷರಾದ ಹಸೈನ್ ಸಿ ಎ, ಪ್ರಧಾನ ಕಾರ್ಯದರ್ಶಿ ಫಾರೂಕ್ ಕಾನಕ್ಕೋಡ್, ಜೊತೆ ಕಾರ್ಯದರ್ಶಿ ಅಮೀರ್ ಕೆ ಎಚ್, ಸದಸ್ಯರಾದ ಸಾದಿಕ್ ಮಾಸ್ಟರ್ ಹಾಗೂ ಅನೇಕರು ಉಪಸ್ಥಿತರಿದ್ದರು.