ಮಸ್ಕತ್ ಹಾಗೂ ದೋಹಾ ದಿಂದ ಇಂದು ಮತ್ತು ಮೇ 22ರಂದು ಮಂಗಳೂರಿಗೆ ವಿಮಾನ….

ಮಂಗಳೂರು: ಮೇ 20ರಂದು ಮಸ್ಕತ್‌ನಿಂದ ಹಾಗೂ ಮೇ 22ರಂದು ದೋಹಾದಿಂದ ಮಂಗಳೂರಿಗೆ ಏರ್ ಇಂಡಿಯಾ ವಿಮಾನ ಆಗಮಿಸಲಿದೆ.
ಮೇ 22ರಂದು ದೋಹಾದಿಂದ ಮತ್ತೂಂದು ವಿಮಾನವು ಬೆಂಗಳೂರಿಗೆ ಬಂದು ಬಳಿಕ ಅಲ್ಲಿಂದ ಮಂಗಳೂರಿಗೆ ಆಗಮಿಸಲಿದೆ. “ವಂದೇ ಭಾರತ’ ಯೋಜನೆಯಡಿ ಈ ವಿಮಾನಗಳಲ್ಲಿ ಆಗಮಿಸುವ ಪ್ರಯಾಣಿಕರಲ್ಲಿ ದ.ಕ. ಜಿಲ್ಲೆಯವರಿಗೆ ಮಾತ್ರ ಮಂಗಳೂರಿನಲ್ಲಿ, ಉಡುಪಿ ಹಾಗೂ ಇತರ ಜಿಲ್ಲೆಯವರಿಗೆ ಅವರವರ ಜಿಲ್ಲೆಗಳಲ್ಲಿ ಕ್ವಾರಂಟೈನ್ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.