ಜ:4-5 ಪುತ್ತೂರಿನಲ್ಲಿ ಸಾವಯವ ಹಬ್ಬ- ಆಮಂತ್ರಣ ಪತ್ರ ಬಿಡುಗಡೆ…..

ಪುತ್ತೂರು: ನಾವು ಉಣ್ಣುವ ಆಹಾರಗಳು ವಿವಿಧ ಕಾರಣಗಳಿಂದಾಗಿ ವಿಷಮಯವಾಗುತ್ತಿದ್ದು, ಅದರಿಂದ ಹೊರಗೆ ಬರಲು ಸಾವಯವ ಆಹಾರದ ಸೇವನೆ ಒಂದೇ ಹಾದಿಯಾಗಿದೆ. ಈ ಹಿನ್ನೆಲೆಯಲ್ಲಿ ಸಾವಯವ ಹಬ್ಬವು ಜನರಲ್ಲಿ ಅರಿವನ್ನು ಮೂಡಿಸಲು ನೆರವಾಗಬೇಕು ಎಂದು ಸಾವಯವ ಹಬ್ಬ ಕ್ರಿಯಾ ಸಮಿತಿಯ ಗೌರವಾಧ್ಯಕ್ಷರಾದ ಸುದಾನ ಶಿಕ್ಷಣ ಸಂಸ್ಥೆಗಳ ಸಂಚಾಲಕ ರೆ.ವಿಜಯ ಹಾರ್ವಿನ್ ಹೇಳಿದರು.
ಅವರು ಸುದಾನ ಶಾಲೆಯಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ 2020ರ ಜನವರಿ 4 ಮತ್ತು 5ರಂದು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ಸಭಾಭವನ ದಲ್ಲಿ ನಡೆಯಲಿರುವ ಸಾವಯವ ಹಬ್ಬದ ಆಮಂತ್ರಣ ಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ನವಚೇತನ, ಸ್ನೇಹ ಸಂಗಮ ಮತ್ತು ಜೆ.ಸಿ.ಐ.ಪುತ್ತೂರು ಇವರು ಆಯೋಜಿಸುವ ಸಾವಯವ ಹಬ್ಬದ ಕುರಿತು ಮತ್ತು ಅಂದು ನಡೆಯುವ ಕಲಾಪಗಳ ಕುರಿತು ಸಂಗಮದ ಕಾರ್ಯದರ್ಶಿ ಸುಹಾಸ್ ಮರಿಕೆ ವಿವರ ನೀಡಿದರು. ಅಧ್ಯಕ್ಷ ಅನಂತಕೃಷ್ಣ ನೈತ್ತಡ್ಕ ಅಂದು ಪ್ರದರ್ಶಿತವಾಗಲಿರುವ ಉದ್ದೇಶಿತ ಮೌಲ್ಯವರ್ಧಿತ ಉತ್ಪನ್ನಗಳ ವಿವರಗಳನ್ನು ನೀಡಿದರು.
ಸಭೆಯಲ್ಲಿ ಜೆಸಿಐ ಅಧ್ಯಕ್ಷ ಜೇಸಿ ಎಸ್.ಜೆ.ವೇಣುಗೋಪಾಲ್, ಕಾರ್ಯದರ್ಶಿ ಜೇಸಿ ಪ್ರಮಿತ ಸಿ.ಹಾಸ್, ಜೇಸಿ ರಘು ಶೆಟ್ಟಿ, ಜೇಸಿ ಶಶಿರಾಜ್, ಜೇಸಿ ಗೌತಮ್ ರೈ, ಪಾಂಡುರಂಗ ಭಟ್, ಪ್ರಕಾಶ್ ಕುಮಾರ್ ಕೊಡೆಂಕಿರಿ, ಆದಿತ್ಯ ಕೊಡೆಂಕಿರಿ, ಗಣರಾಜ್ ಭಟ್, ಶಂಕರಿ ಶರ್ಮ.. ಮೊದಲಾದವರು ಭಾಗವಹಿಸಿದರು. ಸುಹಾಸ್ ಸ್ವಾಗತಿಸಿದರು. ಪ್ರಮಿತ ಸಿ. ಹಾಸ್ ವಂದಿಸಿದರು.

Sponsors

Related Articles

Leave a Reply

Your email address will not be published. Required fields are marked *

Back to top button