ಸೂಡ ಅಧ್ಯಕ್ಷ ರಿಂದ ಕಂದಾಯ ಸಚಿವರಿಗೆ ಮನವಿ…

ಸುಳ್ಯ: ಕರ್ನಾಟಕ ಸರ್ಕಾರದ ಮಹತ್ವಾಕಾoಕ್ಷಿ ಯೋಜನೆಯಾದ ಅಕ್ರಮ ಸಕ್ರಮ ದರ್ಕಾಸ್ ಫೈಲ್ ಗಳ ಪ್ಲಾಟಿಂಗ್ ಮಾಡುವ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಿ ಬಹುಕಾಲದ ಬೇಡಿಕೆಯನ್ನು ಸರಕಾರ ಈಡೇರಿಸಿರುವುದು ಅಭಿನಂದನಾರ್ಹ. ಆದರೆ ನಗರ ವ್ಯಾಪ್ತಿಯಲ್ಲಿ 1996 ರ ಮುಂಚಿತವಾಗಿ ಮಂಜೂರಾದ ಕಡತಗಳಿಗೆ ಮಾತ್ರ ಸೀಮಿತ ಮಾಡಿರುವುದರಿಂದ ತುಂಬಾ ತೊಂದರೆಯಾಗಿರುತ್ತದೆ. ಹಾಗಾಗಿ ನಗರ ವ್ಯಾಪ್ತಿಯಲ್ಲಿ 1996 ನಂತರ ಮಂಜೂರಾದ ಎನ್ ಸಿ ಆರ್ ದರ್ಕಾಸ್ ಕಡತಗಳನ್ನು 1 ರಿಂದ 5 ನಮೂನೆ ಮಾಡಿ ಪ್ಲಾಟಿಂಗ್ ಮಾಡಿಸಲು ಆದೇಶ ನೀಡುವಂತೆ ಸೂಡ ಅಧ್ಯಕ್ಷ ಕೆ. ಎಂ. ಮುಸ್ತಫಾ ಅವರು ಕಂದಾಯ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.

whatsapp image 2025 06 03 at 10.29.44 pm

Related Articles

Back to top button