ಅಯೋಧ್ಯೆ ತೀರ್ಪು – ಟಿ ಎಂ ಶಾಹಿದ್ ಸ್ವಾಗತ…
ಸುಳ್ಯ: ಅಯೋಧ್ಯೆಯ ವಿವಾದಿತ ಸ್ಥಳ ರಾಮಜನ್ಮಭೂಮಿ ನ್ಯಾಸ ಟ್ರಸ್ಟಿಗೆ ಹಾಗೂ ಸುನ್ನಿ ವಕ್ಫ್ ಬೋರ್ಡ್ ಗೆ 5 ಎಕ್ರೆ ಜಾಗವನ್ನು 3 ತಿಂಗಳೊಳಗೆ ನೀಡಲು ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ತಿಳಿಸಿದೆ. ರಾಮಮಂದಿರ ನಿರ್ಮಾಣದ ಹೊಣೆಯನ್ನು ಸರಕಾರ ಹೊರಬೇಕು ಹಾಗೂ ಇದಕ್ಕಾಗಿ ಯೋಜನೆ ರೂಪಿಸಬೇಕು ಎಂದ ಸುಪ್ರೀಂ ಕೋರ್ಟಿನ
ತೀರ್ಪನ್ನು ಕೆ. ಪಿ. ಸಿ. ಸಿ ಯ ಕೊಡಗು ಜಿಲ್ಲಾ ವೀಕ್ಷಕರಾದ ಟಿ. ಎಂ ಶಾಹಿದ್ ತೆಕ್ಕಿಲ್ ಸ್ವಾಗತಿಸಿದ್ದಾರೆ.
ಭಾರತದ ಜಾತ್ಯತೀತ ತತ್ವ ವನ್ನು ಹಾಗು ಸಂವಿಧಾನದ ಘನತೆ ಯನ್ನು ಎತ್ತಿ ಹಿಡಿದ ಮುಖ್ಯ ನ್ಯಾಯಾಧೀಶರ ನೇತೃತ್ವದ ಪಂಚ ಪೀಠದ ಸಾಂವಿಧಾನಿಕ ಸಮಿತಿಯು ದೇಶಕ್ಕೆ ಒಳ್ಳೆಯ ತೀರ್ಮಾನವನ್ನು ನೀಡಿದೆ. ನೂರಾರು ವರ್ಷಗಳಿಂದ ದೇಶದಲ್ಲಿ ಹಿಂದೂ ಮುಸಲ್ಮಾನರ ನಡುವೆ ಕಂದಕ ಏರ್ಪಡಲು ಕೂಡ ಈ ವಿವಾದ ಕಾರಣವಾಗಿತ್ತು. ಅದಕ್ಕೆ ಇಂದು ನೀಡಿರುವ ಸುಪ್ರೀಂ ಕೋರ್ಟಿನ ಅಂತಿಮ ತೀರ್ಪು ಶಾಶ್ವತ ಪರಿಹಾರವನ್ನು ಒದಗಿಸಿದೆ.ಇದನ್ನು ಎಲ್ಲರು ಸ್ವಾಗತಿಸಿ ಹಿಂದೂಗಳು ಮುಸ್ಲಿಂಮರು ಐಕ್ಯತೆಯಿಂದ ಬಾಳಬೇಕೆಂದು ಟಿ. ಎಂ ಶಾಹಿದ್ ತೆಕ್ಕಿಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರು ಶಾಂತಿ ಮತ್ತು ಸೌಹಾರ್ದತೆ ಯನ್ನು ಕಾಪಾಡಬೇಕೆಂದು ಕೂಡ ಅವರು ಕೋರಿದ್ದಾರೆ.