ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು – ರಜನಿ ರೈ, ರಾಧಿಕಾ ಶೆಟ್ಟಿ.ಡಿ.ಎಸ್, ಆಶ್ಲೆ ಡಿ’ಸೋಜ ಅವರಿಗೆ ಡಾಕ್ಟರೇಟ್ ಪದವಿ…

ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ 3 ಮಂದಿ ಸಹಾಯಕ ಪ್ರಾಧ್ಯಾಪಕರು ವಿವಿಧ ವಿಶ್ವವಿದ್ಯಾನಿಲಯಗಳಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ.
ಇಲೆಕ್ಟ್ರಾನಿಕ್ಸ್ ಎಂಡ್ ಕಮ್ಯುನಿಕೇಶನ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರೊ. ರಜನಿ ರೈ ಅವರು ಎ ಮಲ್ಟಿಸ್ಟೇಜ್ ಕಂಪ್ಯೂಟೇಷನಲ್ ಫ್ರೇಮ್ ವರ್ಕ್ ಫಾರ್ ಅಡ್ವಾನ್ಸ್ಡ್ ಇಇಜಿ ಸಿಗ್ನಲ್ ಪ್ರಾಸೆಸಿಂಗ್ ಇನ್ ಎಪಿಲೆಪ್ಟಿಕ್ ಪ್ಯಾಟರ್ನ್ ಎನಾಲಿಸಿಸ್ (A multistage computational framework for advanced EEG signal processing in epileptic pattern analysis) ಎನ್ನುವ ವಿಷಯದ ಬಗ್ಗೆ ಬೆಂಗಳೂರಿನ ನಿಟ್ಟೆ ಮೀನಾಕ್ಷಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರೊಫೆಸರ್ ಡಾ.ಕರುಣಾಕರ ರೈ.ಬಿ ಹಾಗೂ ಕಾರ್ಕಳದ ಎನ್‍ಎಂಎಎಂಐಟಿ ನಿಟ್ಟೆಯ ಅಸೋಸಿಯೇಟ್ ಪ್ರೊಫೆಸರ್ ಡಾ. .ಮಮತ.ಎ.ಎಸ್ ಇವರ ಮಾರ್ಗದರ್ಶನದಲ್ಲಿ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ. ಇವರು 21 ವರ್ಷಗಳ ಬೋಧನಾ ಅನುಭವವನ್ನು ಹೊಂದಿದ್ದಾರೆ.
ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ 18 ವರ್ಷಗಳ ಬೋಧನಾನುಭವ ಹೊಂದಿರುವ ಸಹಾಯಕ ಪ್ರಾಧ್ಯಾಪಕಿ ಪ್ರೊ .ರಾಧಿಕಾ ಶೆಟ್ಟಿ.ಡಿ.ಎಸ್ ಇವರು ಎನಾಲಿಸಿಸ್ ಎಂಡ್ ಕ್ಲಾಸಿಫಿಕೇಶನ್ ಆಫ್ ಗ್ಯಾಸ್ಟ್ರಿಕ್ ಎಂಡ್ ಕೊಲೊನಿಕ್ ಎಪಿಥೆಲಿಯಲ್ ಟ್ಯೂಮರ್ಸ್ ಯೂಸಿಂಗ್ ಮೆಡಿಕಲ್ ಇಮೇಜಿಂಗ್ ಮಾಡೆಲ್ಸ್ (Analysis and Classification of Gastric and Colonic Epithelial Tumors using Medical Imaging Models) ಎನ್ನುವ ವಿಷಯದ ಬಗ್ಗೆ ನಡೆಸಿದ ಸಂಶೊಧನೆಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ. ಇವರು ಮಂಗಳೂರಿನ ಎ.ಜೆ.ಇನ್ಸ್ಟಿಟ್ಯೂಟ್ ಅಫ್ ಇಂಜಿನಿಯರಿಂಗ್ ಎಂಡ್ ಮ್ಯಾನೇಜ್‍ಮೆಂಟಿನ ಪ್ರೊಫೆಸರ್ ಮತ್ತು ಉಪಪ್ರಾಂಶುಪಾಲರಾಗಿರುವ ಡಾ.ಆಂಟೊನಿ.ಪಿ.ಜೆ ಅವರ ಮಾರ್ಗದರ್ಶನದಲ್ಲಿ ಸಂಶೊಧನೆಯನ್ನು ನಡೆಸಿದ್ದಾರೆ.
ಬಿಸಿನೆಸ್ ಫೈಲ್ಯೂರ್ ಪ್ರೆಡಿಕ್ಷನ್: ಎ ಸ್ಟಡಿ ಆಫ್ ಇಂಡಿಯನ್ ಕಂಪೆನೀಸ್ (Business Failure Prediction: A study of Indian companies) ಈ ವಿಷಯದ ಬಗ್ಗೆ ಸಂಶೊಧನೆಯನ್ನು ಮಾಡಿದ ಎಂಬಿಎ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ. ಆಶ್ಲೆ.ಡಿ’ಸೋಜ ಇವರು ಮಂಗಳೂರು ವಿಶ್ವವಿದ್ಯಾನಿಲಯದಿಂದ ಪಿಎಚ್‍ಡಿ ಪದವಿಯನ್ನು ಪಡೆದುಕೊಂಡಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಉದ್ಯಮಾಡಳಿತ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಡಾ.ಚಂದ್ರಶೇಖರ್.ಆರ್ ಇವರ ಮಾರ್ಗದರ್ಶನದಲ್ಲಿ ಸಂಶೊಧನೆಯನ್ನು ಮಾಡಿರುವ ಇವರು ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಎಂಬಿಎ ವಿಭಾಗದಲ್ಲಿ 14 ವರ್ಷಗಳಿಂದ ಬೋಧನೆಯನ್ನು ಮಾಡುತ್ತಿದ್ದಾರೆ.
ಈ ಮೂವರ ಸಾಧನೆಗೆ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಅವರನ್ನು ಅಭಿನಂದಿಸಿದ್ದಾರೆ ಎಂದು ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ ತಿಳಿಸಿದ್ದಾರೆ.




