ಪ್ರಧಾನಿ ಮೋದಿ ಮತ್ತು‌ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಒಂದೇ ತಾಯಿಯ ಮಕ್ಕಳು: ರಮಾನಾಥ ರೈ…..

IMG 20190908 215353 300x140ಮಂಗಳೂರು:ಇಮ್ರಾನ್ ಖಾನ್ ಪಾಕಿಸ್ತಾನದಲ್ಲಿ ಗೆಲ್ಲಲು ಭಾರತವನ್ನು ಬೈಯ್ಯುತ್ತಾರೆ, ಮೋದಿ ಇಲ್ಲಿ ಗೆಲ್ಲಲು ಪಾಕಿಸ್ತಾನವನ್ನ ಬೈಯುತ್ತಾರೆ. ಪ್ರಧಾನಿ ಮೋದಿ ಮತ್ತು‌ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಒಂದೇ ತಾಯಿಯ ಮಕ್ಕಳಿದ್ದಂತೆ, ಇಬ್ಬರೂ ಕೂಡ ಒಂದೇ ರೀತಿಯ ಜನರು. ಮೋದಿ ಕೂಡ ಇಮ್ರಾನ್ ಖಾನ್ ದಾರಿಯಲ್ಲಿಯೇ ಸಾಗುತ್ತಿದ್ದಾರೆ ಎಂದು ಮಾಜಿ ಸಚಿವ ರಮಾನಾಥ ರೈ ಮಂಗಳೂರಿನ ಕಾಂಗ್ರೆಸ್ ‌ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಹಿಂದಿನ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರನ್ನು ಬಿಜೆಪಿ ಹಾಗೂ ಕೆಲವು ಸಂಘಟನೆಗಳು ತಪ್ಪಾಗಿ ಬಿಂಬಿಸಲು ಹೊರಟಿವೆ. ಅಕ್ರಮ ಮರಳುಗಾರಿಕೆ ವಿಚಾರದಲ್ಲಿ ಡಿಸಿ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ‌ಕೆಲಸ ಮಾಡಿದ್ದಾರೆ. ಈ ಹಿಂದೆ ಬಿಜೆಪಿ ಮುಖಂಡರು ಕೂಡ ಸೆಂಥಿಲ್ ಒಳ್ಳೆಯ ಅಧಿಕಾರಿ ಅಂದಿದ್ದಾರೆ. ಆದರೆ ಈಗ ಅವರನ್ನ ತಪ್ಪಿತಸ್ಥರು ಮಾಡುವ ಕೆಲಸ ನಡೆಯುತ್ತಿದೆ ಎಂದೂ ರಮಾನಾಥ್ ರೈ ಹೇಳಿದರು.

Related Articles

Leave a Reply

Your email address will not be published. Required fields are marked *