ಕೂಟ ಮಹಾ ಜಗತ್ತು ಬಂಟ್ವಾಳ -ವಿದ್ಯಾರ್ಥಿ ಸಹಾಯಧನ ವಿತರಣಾ ಕಾರ್ಯಕ್ರಮ…
ಬಂಟ್ವಾಳ: ಕೂಟ ಮಹಾ ಜಗತ್ತು ಬಂಟ್ವಾಳ ಅಂಗ ಸಂಸ್ಥೆ 2022/ 23ನೇ ಸಾಲಿನ 40 ಮಂದಿ ವಿದ್ಯಾರ್ಥಿಗಳಿಗೆ ಬಿಲಿಯನ್ ಫೌಂಡೇಶನ್ ಟ್ರಸ್ಟ್ ಹಾಗೂ ಗುರು ಗಾಯತ್ರಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿ ಸಹಾಯಧನ ವಿತರಣಾ ಕಾರ್ಯಕ್ರಮ ಬಂಟ್ವಾಳ ಮಹಾಲಿಂಗೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಫೆ.26 ರಂದು ಜರಗಿತು.
ಬಂಟ್ವಾಳ ಕೂಟ ಮಹಾ ಜಗತ್ತು ಅಧ್ಯಕ್ಷ ಜಗದೀಶ ಹೊಳ್ಳ, ಕಾರ್ಯದರ್ಶಿ ಗಣಪತಿ ಸೋಮಯಾಜಿ ಕೆ, ಬಂಟ್ವಾಳ ತಾಲೂಕು ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕ ಮತ್ತು ಪುರೋಹಿತ ಪರಿಷತ್ತು ಅಧ್ಯಕ್ಷ ವೇದಮೂರ್ತಿ ಎನ್ ಶಿವರಾಮ ಮಯ್ಯ, ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಸಂಚಾಲಕಿ ಉಮಾ ಸೋಮಯಾಜಿ, ಬಿಲಿಯನ್ ಫೌಂಡೇಶನ್ ಟ್ರಸ್ಟ್ ನ ಕೆ ನರೇಶ್ ಹೊಳ್ಳ, ರಾಮಚಂದ್ರ ಮಯ್ಯ, ಕೂಟ ಮಹಾ ಜಗತ್ತು ಮಹಿಳಾ ವಿಭಾಗದ ವಾಣಿ ಹೊಳ್ಳ, ಪವಿತ್ರ ಮಯ್ಯ, ಭಾರತೀ ಶ್ರೀಧರ ಮೊದಲಾದವರು ಉಪಸ್ಥಿತರಿದ್ದರು.