ಸಜೀಪ ಮೂಡ ಶ್ರೀ ಸದಾಶಿವ ದೇವಸ್ಥಾನ – ನೂತನ ವಸಂತ ಕಟ್ಟೆ ಲೋಕಾರ್ಪಣೆ…

ಬಂಟ್ವಾಳ: ಶ್ರೀ ಈಶ್ವರಮಂಗಳ ಸಜೀಪ ಮೂಡ ಶ್ರೀ ಸದಾಶಿವ ದೇವಸ್ಥಾನ ಇದರ ವಾರ್ಷಿಕ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ದಳಂದಿರ ಸಂತೋಷ್ ಜಿ ಶೆಟ್ಟಿ ಸೇವಾ ರೂಪದಲ್ಲಿ ಕೊಡ ಮಾಡಿದ ನೂತನ ವಸಂತ ಕಟ್ಟೆ ಲೋಕಾರ್ಪಣೆಗೊಳಿಸಲಾಯಿತು.
ಸಜೀಪಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ನ ಸಮಿತಿ ಅಧ್ಯಕ್ಷ ದೇವಿ ಪ್ರಸಾದ್ ಪೂಂಜ, ಮುಗುಳಿಯ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಯಶಂಕರ ಬಾಸ್ರಿತ್ತಾಯ, ಕೆ ಸದಾನಂದ ಶೆಟ್ಟಿ, ಗಿರೀಶ್ ಕುಮಾರ್, ಜಯಪ್ರಕಾಶ್, ಪದ್ಮನಾಭ ಕೊಟ್ಟಾರಿ, ರವಿ ಚಂದ್ರ, ರಮೇಶ್ ಅನ್ನಪ್ಪಾಡಿ, ದೇವದಾಸ್, ಹರೀಶ್ ನಾಯಕ್, ಯಶವಂತ, ಶ್ರುತಿ ಪೂಂಜಾ, ಸ್ವೇತಾ ಎಸ್ ಶೆಟ್ಟಿ, ಪ್ರೇಮ ಜಿ. ಶೆಟ್ಟಿ, ಹರೀಶ್. ರೈ ಮೊದಲಾದವರು ಉಪಸ್ಥಿತರಿದ್ದರು.