ಸರಕಾರಿ ಪ. ಪೂ. ಕಾಲೇಜು ಸಜೀಪಮೂಡ-ನೂತನ ಕಟ್ಟಡಕ್ಕೆ ಸ್ಥಳ ಪರಿಶೀಲನೆ…

ಬಂಟ್ವಾಳ: ಸರಕಾರಿ ಪದವಿ ಪೂರ್ವ ಕಾಲೇಜು ಸಜೀಪಮೂಡ ಬಂಟ್ವಾಳ ಇಲ್ಲಿಗೆ ಸರಕಾರದಿಂದ ನೂತನ ಕಟ್ಟಡ ನಿರ್ಮಾಣಕ್ಕೆ 56 ಲಕ್ಷ ರೂಪಾಯಿ ಮಂಜೂರು ಆಗಿದ್ದು, ಈ ಬಗ್ಗೆ ಕರ್ನಾಟಕ ಗ್ರಾಮೀಣ ಸಮಗ್ರ ಅಭಿವೃದ್ಧಿ ನಿಗಮ ಇದರ ಅಭಿಯಂತರರಾದ ಎಂ ಮಹಾದೇವ ಪ್ರಸಾದ್ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.
ಪ್ರಾಚಾರ್ಯರಾದ ಬಾಬು ಗಾವಂಕರ್, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶ್ರೀಕಾಂತ್ ಶೆಟ್ಟಿ ಸಂಕೇಶ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಎo ಸುಬ್ರಮಣ್ಯ ಬಟ್ ಬರ್ಕೆ ಮಹಾಬಲ ರೈ ,ಎಸ್ ವಿಶ್ವನಾಥ್ ಕೊಟ್ಟಾರಿ ,ಉಪನ್ಯಾಸಕರಾದ ವಾಸುದೇವ ಬೆಳ್ಳೆ, ವಿಷ್ಣುಮೂರ್ತಿ ಮಯ್ಯ, ಸುರೇಶ್ ಐತಾಳ ಮೊದಲಾದವರು ಉಪಸ್ಥಿತರಿದ್ದರು.