ಕೊಕೊನಟ್ ಬರ್ಫಿ…

ಕೊಕೊನಟ್ ಬರ್ಫಿ (ಕೊಬ್ಬರಿ ಮಿಠಾಯಿ) ತಯಾರಿಸುವ ವಿಧಾನ :

ಬಾಣಲೆಯಲ್ಲಿ ಸ್ವಲ್ಪ ನೀರು ಹಾಗೂ ಬೇಕಾದಷ್ಟು ಸಕ್ಕರೆಯನ್ನು ಹಾಕಿ, ಸಕ್ಕರೆ ನೀರಾಗುವ ತನಕ ಕುದಿಸಿ. ನಂತರ ತೆಂಗಿನ ಕಾಯಿ ತುರಿ (ಕೊಬ್ಬರಿ) ಸೇರಿಸಿ ಹದವಾದ ಉರಿಯಲ್ಲಿ ಬೆರೆಸುತ್ತಾ ಇರಬೇಕು. ಪಾಕ ನೋಡಿಕೊಂಡು ಬೇಕಾದರೆ ಹಾಲು ಕೂಡ ಹಾಕಬಹುದು. ಸ್ವಲ್ಪ ಹೊತ್ತಿನ ನಂತರ ಏಲಕ್ಕಿ ಪುಡಿ ಸೇರಿಸಿ ತಿರುಗಿಸುತ್ತಾ ಇರಬೇಕು. ದ್ರಾಕ್ಷಿ , ಗೋಡಂಬಿ ಕೂಡ ಹಾಕಬಹುದು. ಈ ಮಿಶ್ರಣ ಹದ ಬಂದು ತಳ ಬಿಡುತ್ತಾ ಬರುವಾಗ ಬೆಂಕಿಯನ್ನು ಇನ್ನೂ ಚಿಕ್ಕದು ಮಾಡಿಕೊಂಡು ಬೆರೆಸುತ್ತಾ ಇರಬೇಕು. ನಂತರ ತುಪ್ಪ ಸವರಿದ ತಟ್ಟೆಗೆ ಮಿಶ್ರಣವನ್ನು ಸುರಿದು ಸಮನಾಗಿ ಹರಡಿ, ಸ್ವಲ್ಪ ತಣ್ಣಗಾದ ಮೇಲೆ ಬೇಕಾದ ಆಕಾರದಲ್ಲಿ ಕತ್ತರಿಸಿರಿ.

ಬರಹ: ಶ್ರೀಮತಿ ರಶ್ಮಿ ಪಿ.ಸಿ

Rava Coconut Milk Burfi 300x221

Coconut Burfi Recipe 300x230

 

 

Related Articles

Leave a Reply

Your email address will not be published. Required fields are marked *