ಡ್ರೈ ಫ್ರೂಟ್ಸ್ ಲಾಡು…

ಡ್ರೈ ಫ್ರೂಟ್ಸ್ ಲಾಡು ತಯಾರಿಸುವ ವಿಧಾನ:
ಗೋಡಂಬಿ,ಬಾದಾಮಿ, ಖರ್ಜೂರ, ಪಿಸ್ತಾ, ಒಣದ್ರಾಕ್ಷಿ, ಅಂಜೂರವನ್ನು ಕತ್ತರಿಸಿ ಇಟ್ಟುಕೊಳ್ಳಿ. ಈ ಎಲ್ಲ ಒಣ ಹಣ್ಣುಗಳನ್ನು ಒಂದೊಂದಾಗಿ ತುಪ್ಪದಲ್ಲಿ ಹದವಾಗಿ ಹುರಿಯಬೇಕು. ತೆಂಗಿನಕಾಯಿ/ಒಣಕೊಬ್ಬರಿ ತುರಿಯನ್ನು ಕೂಡ ಹದವಾಗಿ ಹುರಿದಿಟ್ಟುಕೊಳ್ಳಬೇಕು.
ಬಾಣಲೆಯಲ್ಲಿ ಸ್ವಲ್ಪ ನೀರು ಮತ್ತು ಬೆಲ್ಲವನ್ನು ಹಾಕಿ ಸಣ್ಣ ಉರಿಯಲ್ಲಿ ಕಾಯಿಸಿ. ಬೆಲ್ಲದ ಪಾಕ ಒಂದೆಳೆ ಹದಕ್ಕೆ ಬಂದಾಗ ಅದಕ್ಕೆ ಹುರಿದಿಟ್ಟುಕೊಂಡಿರುವ ಎಲ್ಲಾ ಒಣ ಹಣ್ಣುಗಳನ್ನು ಹಾಗೂ ತೆಂಗಿನಕಾಯಿ/ಒಣಕೊಬ್ಬರಿ ತುರಿಯನ್ನು ಹಾಕಿ ಚೆನ್ನಾಗಿ ಬೆರೆಸಬೇಕು. ನಂತರ ಈ ಮಿಶ್ರಣ ಪೂರ್ತಿ ತಣ್ಣಗಾಗುವ ಮೊದಲೇ ಉಂಡೆ ಮಾಡಬೇಕು. ಬರಹ: ಶ್ರೀಮತಿ ರಶ್ಮಿ ಪಿ.ಸಿ