ಶುಕ್ರವಾರ – ದಕ್ಷಿಣ ಕನ್ನಡದಲ್ಲಿ 13 ,ಉಡುಪಿ 11 ಹಾಗೂ ರಾಜ್ಯದಲ್ಲಿ 337 ಕೊರೊನ ಪಾಸಿಟಿವ್…
ಮಂಗಳೂರು : ಇಂದು (ಶುಕ್ರವಾರ) ದಕ್ಷಿಣ ಕನ್ನಡದಲ್ಲಿ 13 , ಉಡುಪಿ ಜಿಲ್ಲೆಯಲ್ಲಿ 11 ಹಾಗೂ ರಾಜ್ಯದಲ್ಲಿ 337 ಕೊರೊನ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.
ದ.ಕ. ಜಿಲ್ಲೆಯಲ್ಲಿ 11 ಮಂದಿ ವಿದೇಶದಿಂದ ಬಂದವರಲ್ಲಿ ಸೋಂಕು ಪತ್ತೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 1050 ಕ್ಕೆ ಏರಿಕೆಯಾಗಿದೆ. ಉಡುಪಿಯಲ್ಲಿ ಗುರುವಾರ ಮುಂಬೈಯಿಂದ ತೆಕ್ಕಟ್ಟೆಗೆ ಬಂದಿದ್ದ 54 ವರ್ಷ ಪ್ರಾಯದ ವ್ಯಕ್ತಿ ಸಂಜೆಯ ವೇಳೆಗೆ ಮೃತ ಪಟ್ಟಿದ್ದು, ಅವರ ಮೃತ ದೇಹದ ಗಂಟಲು ದ್ರವ ಪರೀಕ್ಷೆ ನಡೆಸಿದಾಗ ಕೊರೊನಾ ಸೋಂಕು ಇರುವುದು ದೃಢವಾಗಿದೆ.
ಇನ್ನು ರಾಜ್ಯದಲ್ಲಿ ಇಂದು ಮತ್ತೆ 337 ಜನರಿಗೆ ಕೊರೊನ ಸೋಂಕು ದೃಢವಾಗಿದೆ. ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 8281ಕ್ಕೆ ಏರಿಕೆಯಾಗಿದೆ.ಬೆಂಗಳೂರು ನಗರದಲ್ಲಿಂದು 138 ಜನರಿಗೆ ಸೋಂಕು ತಾಗಿರುವುದು ದೃಢವಾಗಿದೆ. ಕಲಬುರಗಿ 52 , ಬಳ್ಳಾರಿಯಲ್ಲಿ 37, ಹಾಸನದಲ್ಲಿ 18, ದಕ್ಷಿಣ ಕನ್ನಡದಲ್ಲಿ 13, ದಾವಣಗೆರೆ 12, ಉಡುಪಿ ಜಿಲ್ಲೆ 11 ಮತ್ತು ಬೀದರ್ ನಲ್ಲಿ 10 ಮಂದಿಗೆ ಕೊರೊನ ಸೋಂಕು ದೃಢವಾಗಿದೆ.
ಕಾಸರಗೋಡು ಜಿಲ್ಲೆಯಲ್ಲಿ ಇಂದು 4 ಕೊರೋನಾ ಪಾಸಿಟಿವ್ ದೃಢಪಟ್ಟಿದೆ