ಕನ್ನಡ ಕಲಿಯೋಣ ಬನ್ನಿ-ವಿದ್ಯಾರ್ಥಿಗಳ ಬೇಸಿಗೆ ಶಿಬಿರ…

ಬಂಟ್ವಾಳ:ಶಾಲೆಗಳಲ್ಲಿ ಕನ್ನಡ ಭಾಷೆಯು ಕಡೆಗಣಿಸಲ್ಪಟ್ಟಿದ್ದು ಮನೆಮನೆಗಳಲ್ಲಿ ಕನ್ನಡ ಭಾಷೆಯನ್ನು ಕಲಿಸಬೇಕಾದ ಅನಿವಾರ್ಯತೆ ಇದೆ. ಮೊಬೈಲ್ ಬಳಕೆಯಿಂದ ಕನ್ನಡದಲ್ಲಿ ಬರೆಯುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳು ಕಳೆದುಕೊಳ್ಳುತ್ತಿದ್ದಾರೆ.ಹೀಗಾದರೆ ಮುಂದೆ ಮುಂದೆ ಕನ್ನಡ ಪುಸ್ತಕ ಮಾತ್ರವಲ್ಲ ದಿನಪತ್ರಿಕೆಯನ್ನು ಓದುವವರೂ ಇಲ್ಲದಾಗಬಹುದು ಎಂದು ಬಂಟ್ವಾಳ ತಾಲೂಕು ಕಸಾಪ ಮಾಜಿ ಅಧ್ಯಕ್ಷ ‌ಜಯಾನಂದ ಪೆರಾಜೆ ಕಳವಳ ವ್ಯಕ್ತಪಡಿಸಿದರು.
ಅವರು ಪೆರಾಜೆ ಮಠದ ಬಳಿ ವಿಜಯಶ್ರೀರಾಮ ಸಭಾಂಗಣದಲ್ಲಿ ಮಾಣಿ ಲಯನ್ಸ್ ಕ್ಲಬ್ ಸಹಕಾರದಲ್ಲಿ ನಡೆಯುವ ಕನ್ನಡ ಕಲಿಯೋಣ ಬನ್ನಿ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಶ್ರೀರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಲೋಹಿತ್ ಕುಮಾರ್ ವಿಷು ಹಬ್ಬದ ಬಗ್ಗೆ ಮಾತನಾಡಿ ನಮ್ಮ ಪರಿಸರದ ಗಿಡಮರಗಳ ಹೆಸರೂ ಮಕ್ಕಳಿಗೆ ಗೊತ್ತಿಲ್ಲದಂತಾಗಿದೆ ಎಂದರು.
ಮಾಣಿ ಲಯನ್ಸ್ ಕ್ಲಬ್ ಅಧ್ಯಕ್ಷ ಜನಾರ್ದನ ಪೆರಾಜೆ ಅಧ್ಯಕ್ಷತೆ ವಹಿಸಿ ಶಿಬಿರದ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದು ಹೇಳಿದರು. ಭಾರತಿ ಸೇವಾಕೇಂದ್ರ ಬಿಸಿರೋಡು ಇದರ ಮುಖ್ಯಸ್ಥೆ ಭಾರತಿ, ವರಲಕ್ಷ್ಮೀ ಸೇವಾ ಸಮಿತಿ ಪೆರಾಜೆ ಸದಸ್ಯೆ ಶಶಿಕಲಾ‌ ಶುಭಹಾರೈಸಿ ಮಾತನಾಡಿದರು.

ಕಲ್ಲಡ್ಕ ಶ್ರೀರಾಮ‌ ಆಂಗ್ಲಮಾಧ್ಯಮ ಶಾಲೆಯ ಶಿಕ್ಷಕಿ ಅಮಿತಾ ಅನಿಲ್ ಸ್ವಾಗತಿಸಿ ನಿರೂಪಿಸಿದರು. ವಿದ್ಯಾರ್ಥಿನಿ ಭೂಮಿ ನಾಡಗೀತೆ ಹಾಡಿ ವಂದಿಸಿದರು. ಒಂದು ತಿಂಗಳು ಕನ್ನಡ ಭಾಷಾ ಕಲಿಕೆಯ ಶಿಬಿರವು ವಿವಿಧ ಚಟುವಟಿಕೆಗಳಿಂದ ಹಲವು ಶಿಕ್ಷಕರ ಸಹಕಾರದೊಂದಿಗೆ ನಡೆಯಲಿದೆ.

Related Articles

Back to top button