ತುಂಬೆ ಗ್ರೂಪ್‌ ಅಧ್ಯಕ್ಷರಾದ ತುಂಬೆ ಮೊಯ್ದೀನ್ ಹಾಗು ಟಿಎಂ ಶಾಹಿದ್ ತೆಕ್ಕಿಲ್ ಭೇಟಿ – ಕಾರ್ಮಿಕರ ಜೊತೆ ಚರ್ಚೆ…

ದುಬೈ: ಯುಎಇಯ ಅಜ್ಮಾನ್ ನಲ್ಲಿರುವ ತುಂಬೆ ಗ್ರೂಪ್ ಅಧ್ಯಕ್ಷರಾದ ಡಾ. ತುಂಬೆ ಮೊಯ್ದೀನ್ ಅವರನ್ನುಕರ್ನಾಟಕ ಸರಕಾರದ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ಭೇಟಿಯಾಗಿ ಚರ್ಚಿಸಿದರು.
ಕರ್ನಾಟಕದ ವಿಶೇಷವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸಾವಿರಾರು ಜನರಿಗೆ ದುಡಿಯಲು ಅವಕಾಶ ದೊರಕಿಸಿಕೊಟ್ಟು ಅಂತರಾಷ್ಟ್ರ ಮಟ್ಟಕ್ಕೆ ಸಂಸ್ಥೆಯನ್ನು ಬೆಳಿಸಿ ಕರ್ನಾಟಕ ರಾಜ್ಯಕ್ಕೆ ಮತ್ತು ಸಮುದಾಯಕ್ಕೆ ಕೀರ್ತಿ ತಂದ ಡಾಕ್ಟರ್ ತುಂಬೆ ಮೊಯ್ದೀನ್ ಅವರನ್ನು ಕರ್ನಾಟಕ ಸರಕಾರದ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ಅಭಿನಂದಿಸಿದರು.
ಡಾಕ್ಟರ್ ತುಂಬೆ ಮೊಯ್ದೀನ್ ಅವರ ನೇತೃತ್ವದಲ್ಲಿ ವೈದ್ಯಕೀಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯನ್ನು ಅಂತರಾಷ್ಟ್ರ ಮಟ್ಟದ ಸಂಸ್ಥೆಯಾಗಿ ರೂಪಿಸಲು ಅವರ ಸುಪುತ್ರರಾದ ಯುವ ಉದ್ಯಮಿಗಳಾದ ಅಕ್ಬರ್ ಹಾಗು ಅಕ್ರಮ್ ಅವರು ಪ್ರಮುಖ ಪಾತ್ರ ವಹಿಸುತ್ತಿದ್ದು, ವಿವಿಧ ವಿಭಾಗಗಳಲ್ಲಿ ನೇತೃತ್ವ ವಹಿಸಿ ಮುನ್ನಡೆಸುತ್ತಿರುವ ರೀತಿ ಸಮುದಾಯದ ಹಾಗು ರಾಜ್ಯದ ಯುವಕರಿಗೆ ಮಾದರಿ ಎಂದು ಟಿ ಎಂ ಶಾಹಿದ್ ತೆಕ್ಕಿಲ್ ಅವರನ್ನು ಭೇಟಿ ಸಂದರ್ಭದಲ್ಲಿ ಅಭಿನಂದಿಸಿದರು.
1998ರಲ್ಲಿ ಅಜ್ಮಾನ್‌ನಲ್ಲಿ ಗಲ್ಫ್ ಮೆಡಿಕಲ್ ಯುನಿವರ್ಸಿಟಿ (GMU) ಸ್ಥಾಪಿಸಿ ಇಂದು ಅತ್ಯಾಧುನಿಕ ಶಿಕ್ಷಣ ಮತ್ತು ಸಂಶೋಧನೆಗಳಿಗೆ ವಿಶ್ವ ಮಾನ್ಯತೆ ಪಡೆದು ಸುಮಾರು 5,000 ವಿವಿಧ ವಿದೇಶ ರಾಜ್ಯಗಳ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು ವಿವಿಧ ರಾಷ್ಟ್ರಗಳ 3,000 ಉದ್ಯೋಗಿಗಳು ದುಡಿಯುತ್ತಿದ್ದಾರೆ. ಆರೋಗ್ಯ ಕ್ಷೇತ್ರದಲ್ಲಿ ತುಂಬೆ ಆಸ್ಪತ್ರೆಗಳು, ಕ್ಲಿನಿಕ್‌ಗಳು, ಡಯಗ್ನೋಸ್ಟಿಕ್ ಲ್ಯಾಬ್‌ಗಳು ಮತ್ತು ಫಾರ್ಮಸಿಗಳ ಮೂಲಕ ಲಕ್ಷಾಂತರ ರೋಗಿಗಳಿಗೆ ಸೇವೆ ನೀಡಲಾಗಿದೆ. ಅಜ್ಮಾನ್ ಬೆಳೆವಣಿಗೆಯಲ್ಲಿ ತುಂಬೆ ಸಂಸ್ಥೆಯ ಕೊಡುಗೆ ಅಪಾರ ಇದೆ. ಯೆನೆಪೋಯ ವಿಶ್ವ ವಿದ್ಯಾನಿಲಯದ ಕುಲಪತಿಗಳಾದ ಯೆನೆಪೋಯ ಅಬ್ದುಲ್ಲ ಕುನ್ಹಿ ಮತ್ತು ತುಂಬೆ ಮೊಯ್ದೀನ್ ಅವರ ಸೇವೆ ಸಮುದಾಯಕ್ಕೆ ಮಾದರಿ ಮತ್ತು ಹೆಮ್ಮೆ ಎಂದು ಈ ಸಂದರ್ಭದಲ್ಲಿ ಟಿಎಂ ಶಾಹಿದ್ ತೆಕ್ಕಿಲ್ ಅವರು ತಿಳಿಸಿದರು. ಅಲ್ಲಿ ದುಡಿಯುತ್ತಿರುವ ಕರ್ನಾಟಕದ ಕಾರ್ಮಿಕರ ಜೊತೆ ಭೇಟಿ ಮಾಡಿ ಅವರ ಸಮಸ್ಯೆಗಳನ್ನು ತಿಳಿದುಕೊಂಡರು.
ಈ ಸಂದರ್ಭದಲ್ಲಿ ದುಬೈ ಕಾಂಗ್ರೆಸ್ ಅಧ್ಯಕ್ಷರಾದ ಪಿ ಕೆ ರಫೀಕ್ ಮಟ್ಟನ್ನೂರ್ ಪಟೇಲ್ ಗೂನಡ್ಕ, ತುಂಬೆ ಹಾಸ್ಪಿಟಲ್ ನಲ್ಲಿ ತರಬೇತಿ ಶಿಕ್ಷಣ ಮಾಡುತ್ತಿರುವ ತೆಕ್ಕಿಲ್ ಶಾಲೆ ಹಳೆಯ ವಿದ್ಯಾರ್ಥಿ, ಯೆನೆಪೋಯ ಸಂಸ್ಥೆಯಲ್ಲಿ ಪದವಿ ಪೂರೈಸಿದ ಎನ್ ಎಸ್ ಯು ಐ ನಾಯಕ ಉಬೈಸ್ ಗೂನಡ್ಕ, ತುಂಬೆ ಸಂಸ್ಥೆಯ ಮಾನವ ಸಂಪನ್ಮೂಲದ ಅಧಿಕಾರಿ ಫಾರೂಕ್ ಬಿಳಿಯಾರು ಉಪಸ್ಥಿತರಿದ್ದು ಕಾರ್ಮಿಕರ ಬಗ್ಗೆ ಮಾಹಿತಿ ನೀಡಿ ಚರ್ಚಿಸಿದರು.

whatsapp image 2026 04 16 at 1.11.22 pm

whatsapp image 2026 04 16 at 1.11.23 pm

Related Articles

Back to top button