ಕಾರಿಗೆ ಸೈಡ್ ಕೊಡೋ ವಿಚಾರಕ್ಕೆ ರಸ್ತೆಯಲ್ಲೇ ಸಿನೆಮಾ ನಟಿಯಿಂದ ಫೈಟ್ …

ಬಂಟ್ವಾಳ : ಕಾರಿಗೆ ಸೈಡ್ ಕೊಡೋ ವಿಚಾರಕ್ಕೆ ನಟಿ ಹಾಗೂ ಇನ್ನೊಂದು ಕಾರಿನವರ ನಡುವೆ ರಸ್ತೆಯಲ್ಲಿ ಸಿನೆಮಾ ಮಾದರಿ ಹೊಡೆದಾಟ ನಡೆದಿದ್ದು, ಹೊಡೆದಾಟದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೆರುವಾಯಿ ಬಳಿ ಈ ಘಟನೆ ನಡೆದಿದೆ. ಕಾರಿನಲ್ಲಿ ನಾಯಕ ನಟನೊಂದಿಗೆ ಹೋಗುತ್ತಿದ್ದ ನಟಿ ಶೋಭಿತ ಮತ್ತು ಮತ್ತೊಂದು ಕಾರಿನವರೊಂದಿಗೆ ಸೈಡ್‌ ಕೊಡೋ ವಿಚಾರದಲ್ಲಿ ವಾಗ್ವಾದ ನಡೆದಿದ್ದು ಮಿತಿಮೀರಿ ಸಾರ್ವಜನಿಕರ ಎದುರೇ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಫೆಬ್ರವರಿ 10 ರಂದು ನಡೆದಿದ್ದು ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಹೊಡೆದಾಟದ ದೃಶ್ಯಗಳು ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿದೆ.

ಎದುರು ಕಾರಿನವರು ನಟಿ ಮೇಲೆ ಕೈ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದನ್ನು ಗಮನಿಸಿದ ಸ್ಥಳೀಯರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

IMG 20200212 161539 270x300

Related Articles

Leave a Reply

Your email address will not be published. Required fields are marked *