ಕುತ್ತಾರಿನಲ್ಲಿ’ಚಿಣ್ಣರ ಚಿಗುರು’ ಮಕ್ಕಳ ಬೇಸಿಗೆ ಶಿಬಿರ…

ಶಿಬಿರಗಳಿಂದ ಜೀವನ ಕೌಶಲ್ಯದ ಪಾಠ: ಭಾಸ್ಕರ ರೈ ಕುಕ್ಕುವಳ್ಳಿ...

ಮಂಗಳೂರು: ‘ಎಳೆಯ ಮಕ್ಕಳು ಮನೆ ಮತ್ತು ಶಾಲೆಗಳಲ್ಲಿ ದೊರೆಯುವ ಸಂಸ್ಕಾರ ಹಾಗೂ ಶಿಕ್ಷಣಕ್ಕೆ ಹೊರತಾಗಿ ಸಮಾಜದಿಂದಲೂ ಕಲಿಯುವುದು ಬಹಳಷ್ಟಿದೆ.ರಜಾದಿನಗಳಲ್ಲಿ ಅಲ್ಲಲ್ಲಿ ನಡೆಯುವ ವಿವಿಧ ಶಿಬಿರಗಳಲ್ಲಿ ಸೇರಿಕೊಳ್ಳುವುದರಿಂದ ಮಕ್ಕಳಿಗೆ ಜೀವನ ಕೌಶಲ್ಯದ ಪಾಠ ಲಭಿಸುತ್ತದೆ. ಸೌಹಾರ್ದ ಕಲಾವಿದರಂತಹ ಯುವ ಸಂಘಟನೆಗಳು ಇಂತಹ ಶಿಬಿರಗಳನ್ನು ಸಂಘಟಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿವೆ’ ಎಂದು ವಿಶ್ರಾಂತ ಪ್ರಾಚಾರ್ಯರು ಹಾಗೂ ಸಾಹಿತಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.
ಸೌಹಾರ್ದ ಕಲಾವಿದರು ಕುತ್ತಾರು ಇದರ ವತಿಯಿಂದ ಮುನ್ನೂರು ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆಯಲ್ಲಿ 3 ದಿನಗಳ ಕಾಲ ನಡೆಯುವ ‘ಚಿಣ್ಣರ ಚಿಗುರು’ ಮಕ್ಕಳ ಸಂತಸ ಕಲಿಕಾ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮುದಾಯ ಕರ್ನಾಟಕದ ರಾಜ್ಯ ಕಾರ್ಯದರ್ಶಿಯಾದ ಮನೋಜ್ ವಾಮಂಜೂರ್, ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಮುನ್ನೂರು ಮುಖ್ಯ ಶಿಕ್ಷಕಿ ಶಕುಂತಲಾ ಎಸ್. ಉಳ್ಳಾಲ್ , ವಾಮಂಜೂರ್ ವಿದ್ಯಾ ಜ್ಯೋತಿ ಶಾಲೆಯ ಶಿಕ್ಷಕಿ ಚಂಚಲಾಕ್ಷಿ ಪದವಿನಂಗಡಿ , ಮುನ್ನೂರು ದ.ಕ.ಜಿ ಪಂ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಪ್ರಮೀಳಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದರು. ಸೌಹಾರ್ದ ಕಲಾವಿದರ ನಿರ್ದೇಶಕರಾದ ಪ್ರಥ್ವಿರಾಜ್ ಎಂ.ಕಬೆಕೋಡಿ ಅಧ್ಯಕ್ಷತೆ ವಹಿಸಿದ್ದರು.
ಸೌಹಾರ್ದ ಕಲಾವಿದರು ತಂಡದ ಸದಸ್ಯರಾದ ಭೂಮಿಕಾ ಸ್ವಾಗತಿಸಿದರು. ತ್ರಿಷಾ ಕಂಪ ಕಾರ್ಯಕ್ರಮ ನಿರೂಪಿಸಿ, ತನ್ಮಯ್ ವಂದಿಸಿದರು.ಚಿಣ್ಣರ ಚಿಗುರು ಕಾರ್ಯಕ್ರಮ ಏಪ್ರಿಲ್ 24 ರಿಂದ ಏಪ್ರಿಲ್ 26 ರ ತನಕ ದ. ಕ. ಜಿ. ಪಂ ಹಿರಿಯ ಪ್ರಾಥಮಿಕ ಶಾಲೆ ಮುನ್ನೂರು ಇಲ್ಲಿ ನಡೆಯಲಿದೆ.

whatsapp image 2026 04 24 at 8.32.33 pm (1)

whatsapp image 2026 04 24 at 8.32.34 pm

Related Articles

Back to top button