ಕಾರ್ಮಿಕ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾಗಿ ಟಿ.ಎಂ ಶಾಹಿದ್ ತೆಕ್ಕಿಲ್ ಮತ್ತು ಇಪ್ಪತ್ತಾರು ಸದಸ್ಯರ ನೇಮಕ…

ಬೆಂಗಳೂರು : ಕರ್ನಾಟಕ ಕಾರ್ಮಿಕ ಇಲಾಖೆಯ ಅಧೀನದಲ್ಲಿರುವ ಕಾರ್ಮಿಕ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾಗಿ ಟಿ ಎಂ ಶಾಹಿದ್ ತೆಕ್ಕಿಲ್ ಅವರನ್ನು ಮತ್ತು ಸದಸ್ಯರನ್ನು ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ ಶಾಹಿದ್ ಅವರು ಕರ್ನಾಟಕ ರಾಜ್ಯ ವಕ್ಫ್ ಕೌನ್ಸಿಲ್ ನ ಸದಸ್ಯರಾಗಿ, ಕಾರ್ಮಿಕ ಕಲ್ಯಾಣ ಮಂಡಳಿಯ ಸದಸ್ಯರಾಗಿ, ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ದಿ ನಿಗಮದ ನಿರ್ದೇಶಕರಾಗಿ, ಎರಡು ಬಾರಿ ಕೇಂದ್ರ ನಾರುಮಂಡಳಿ ಸದಸ್ಯರಾಗಿ, ರಾಜ್ಯದ ರಾಜೀವ್ ಯೂತ್ ಪೌಂಡೇಶನ್ ನ ಅಧ್ಯಕ್ಷರಾಗಿ,ಅಖಿಲ ಭಾರತೀಯ ಬ್ಯಾರಿ ಪರಿಷತ್ ನ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರು ರಾಜಕೀಯ ದುರೀಣ, ಪ್ರಸ್ತುತ ತೆಕ್ಕಿಲ್ ಗ್ರಾಮೀಣಾಭಿವೃದ್ದಿ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ,ಗೂನಡ್ಕ ತೆಕ್ಕಿಲ್ ಶಿಕ್ಷಣ ಸಂಸ್ಥೆಯ ಸ್ಥಾಪಕ ಅಧ್ಯಕ್ಷರು ಹಲವಾರು ಸಾಮಾಜಿಕ, ರಾಜಕೀಯ ಮತ್ತು ಧಾರ್ಮಿಕ , ಕ್ರೀಡಾ ಕ್ಷೇತ್ರದಲ್ಲಿ ದುಡಿಯುತ್ತಿರುವ ಇವರು ಪ್ರತಿಷ್ಠಿತ ತೆಕ್ಕಿಲ್ ಮನೆತನದವರು.
26 ಸೆಪ್ಟೆಂಬರ್ 2025 ರಂದು ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷರಾಗಿ ರಾಜ್ಯ ಸರ್ಕಾರ ಆದೇಶ ಹೊರಡಿಸಲಾಗಿತ್ತು, ನಂತರ ಡಿಸೆಂಬರ್ 24, 2025 ರಂದು ರಾಜ್ಯ ಸಚಿವ ಸ್ಥಾನ ಮಾನ ನೀಡಲಾಯಿತು. ಇದೀಗ ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿಯನ್ನು ಪುನರ್ ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಮಂಡಳಿಯ ನೂತನ ಅಧ್ಯಕ್ಷರಾಗಿ ಸುಳ್ಯ ತಾಲೂಕಿನ ಅರಂತೋಡಿನ ಟಿ.ಎಂ. ಶಾಹೀದ್ ತೆಕ್ಕಿಲ್ ಅವರನ್ನು ನೇಮಕ ಮಾಡಲಾಗಿದೆ. ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರ ಶಿಫಾರಸ್ಸಿ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆದೇಶದಂತೆ ನೇಮಕ ಮಾಡಲಾಗಿದೆ ಪ್ರಸ್ತುತ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ಶ್ರೀಯುತರು ,ಕೆಪಿಸಿಸಿ ಕಾರ್ಯದರ್ಶಿಯಾಗಿ ,ವಕ್ತಾರರಾಗಿ,ಯುವಕ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ, ಎನ್ ಎಸ್ ಯು ಐ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆಸಲ್ಲಿಸಿದ್ದು 1998 ರಿಂದ ಎನ್ ಎಸ್ ಯು ಐ ಸುಳ್ಯ ತಾಲ್ಲೂಕು ಪ್ರಧಾನ ಕಾರ್ಯದರ್ಶಿಯಾಗಿ ರಾಜಕೀಯ ಪ್ರಾರಂಭಿಸಿದ ಶ್ರೀಯುತರು ಪಕ್ಷದಲ್ಲಿ ರಾಜ್ಯದ ಹಲವು ಜಿಲ್ಲೆಗಳ ಉಸ್ತವಾರಿ ವಹಿಸಿದ್ದು ಪ್ರಸ್ತುತ ಹಾಸನ ಜಿಲ್ಲೆಯ ಉಸ್ತುವಾರಿಯಾಗಿದ್ದಾರೆ ವಿದ್ಯಾರ್ಥೀ ಯುವಜನ ಪರವಾಗಿ ಹಲವಾರು ಹೋರಾಟ ನಡೆಸಿದ ಅವರು 1993 ರಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯದ ಉಪಾಧ್ಯಕ್ಷರಾಗಿದ್ದರು
ಕಾರ್ಮಿಕ ಇಲಾಖೆಯು ಮೇ 6, 2026 ರಂದು ಈ ಬಗ್ಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಪ್ರಸ್ತುತ ಜಾರಿಯಲ್ಲಿರುವ ‘ದಿ ಕೋಡ್ ಆನ್ ವೇಜಸ್ 2019’ರ (The Code on Wages 2019) ಸೆಕ್ಷನ್ 42ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಸರ್ಕಾರವು ಈ ನೇಮಕಾತಿ ಮಾಡಿದೆ. ಮಂಡಳಿಯ ಅವಧಿಯು ಅಧಿಸೂಚನೆ ಹೊರಡಿಸಿದ ದಿನಾಂಕದಿಂದ ಎರಡು ವರ್ಷಗಳವರೆಗೆ ಜಾರಿಯಲ್ಲಿರುತ್ತದೆ.
ಅಧ್ಯಕ್ಷರಾಗಿ ಸರಕಾರದ ಪ್ರತಿನಿಧಿ: ದಕ್ಷಿಣ ಕನ್ನಡ ಜಿಲ್ಲೆಯ ಶ್ರೀ ಟಿ. ಎಂ. ಶಾಹೀದ್ ತೆಕ್ಕಿಲ್ ಅವರು ಸರಕಾರದ ಪ್ರತಿನಿಧಿಗಳ ಕೋಟಾದಲ್ಲಿ ಮಂಡಳಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಮಂಡಳಿಯ ಸ್ವರೂಪ: ಈ ಸಲಹಾ ಮಂಡಳಿಯು ಸ್ವತಂತ್ರ ಪ್ರತಿನಿಧಿಗಳು, ಕಾರ್ಮಿಕರ ಪ್ರತಿನಿಧಿಗಳು ಮತ್ತು ಆಡಳಿತ ವರ್ಗದವರ ಪ್ರತಿನಿಧಿಗಳನ್ನು ಒಳಗೊಂಡಿದೆ.
ಸರ್ಕಾರಿ ಅಧಿಕಾರಿಗಳ ಪ್ರಾತಿನಿಧ್ಯ: ಮಂಡಳಿಯಲ್ಲಿ ಕಾರ್ಮಿಕ ಆಯುಕ್ತರು, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಕಾರ್ಯದರ್ಶಿಗಳು, ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯ ನಿರ್ದೇಶಕರು ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳು ಸದಸ್ಯರಾಗಿದ್ದಾರೆ.
​ಕಾರ್ಮಿಕ ಸಂಘಟನೆಗಳ ಪಾಲ್ಗೊಳ್ಳುವಿಕೆ: ಕಾರ್ಮಿಕರ ಪ್ರತಿನಿಧಿಗಳಾಗಿ INTUC, CITU, AIUTUC, BMS, HMS ಸೇರಿದಂತೆ ಪ್ರಮುಖ ಕಾರ್ಮಿಕ ಸಂಘಟನೆಗಳ ಅಧ್ಯಕ್ಷರು ಅಥವಾ ಪ್ರಧಾನ ಕಾರ್ಯದರ್ಶಿಗಳು ಮಂಡಳಿಯಲ್ಲಿದ್ದಾರೆ.
​ಆಡಳಿತ ವರ್ಗದ ಪ್ರಾತಿನಿಧ್ಯ: ಕೈಗಾರಿಕೆ ಮತ್ತು ವಾಣಿಜ್ಯೋದ್ಯಮಗಳ ಪರವಾಗಿ FKCCI, KASSIA, ಪೀಣ್ಯ ಇಂಡಸ್ಟ್ರೀಸ್ ಅಸೋಸಿಯೇಷನ್, ಮತ್ತು KEA ಮುಂತಾದ ಸಂಸ್ಥೆಗಳ ಪ್ರತಿನಿಧಿಗಳನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.
ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿಯ ಸದಸ್ಯರ ಪಟ್ಟಿ
1. ​ಟಿ. ಎಂ. ಶಾಹೀದ್ ತೆಕ್ಕಿಲ್, ತೆಕ್ಕಿಲ್ ಗ್ರಾಮ, ಅರಂತೋಡು, ಸುಳ್ಯ ತಾಲ್ಲೂಕು (ಅಧ್ಯಕ್ಷರು)

2. ​ಕಾರ್ಮಿಕ ಆಯುಕ್ತರು, ಕಾರ್ಮಿಕ ಭವನ, ಬನ್ನೇರುಘಟ್ಟ ರಸ್ತೆ, ಬೆಂಗಳೂರು (ಸದಸ್ಯರು)

3. ​ಕಾರ್ಯದರ್ಶಿಗಳು, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಬೆಂಗಳೂರು (ಸದಸ್ಯರು)

4. ​ನಿರ್ದೇಶಕರು, ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ, ಬಹುಮಹಡಿ ಕಟ್ಟಡ, ಬೆಂಗಳೂರು (ಸದಸ್ಯರು)

5. ​ಜಂಟಿ ಕಾರ್ಯದರ್ಶಿ, ಆರ್ಥಿಕ ಇಲಾಖೆ, ವಿಧಾನ ಸೌಧ, ಬೆಂಗಳೂರು (ಸದಸ್ಯರು)

6. ​ನಿರ್ದೇಶಕರು, ಕಾರ್ಖಾನೆಗಳು, ಬಾಯ್ಲರುಗಳು, ಕೈಗಾರಿಕಾ ಸುರಕ್ಷೆ ಮತ್ತು ಸ್ವಾಸ್ಥ್ಯ ಇಲಾಖೆ, ಬೆಂಗಳೂರು (ಸದಸ್ಯರು)

7. ​ಜಂಟಿ ಕಾರ್ಮಿಕ ಆಯುಕ್ತರು, ಕನಿಷ್ಠ ವೇತನ ಶಾಖೆ, ಕಾರ್ಮಿಕ ಭವನ, ಬೆಂಗಳೂರು (ಸದಸ್ಯರು)

8. ​ಜಂಟಿ ನಿರ್ದೇಶಕರು, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ, ಬೆಂಗಳೂರು (ಸದಸ್ಯರು)

9. ​ಸಹಾಯಕ ಕಾರ್ಮಿಕ ಆಯುಕ್ತರು ಮತ್ತು ಕಾರ್ಯದರ್ಶಿ, ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ, ಬೆಂಗಳೂರು (ಸದಸ್ಯ ಕಾರ್ಯದರ್ಶಿ)

ಕಾರ್ಮಿಕರ ಪ್ರತಿನಿಧಿಗಳು (ಎಲ್ಲರೂ ಸದಸ್ಯರು)

1. ಅಧ್ಯಕ್ಷರು / ಪ್ರಧಾನ ಕಾರ್ಯದರ್ಶಿ, ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್ (INTUC), ವೈಯಾಲಿಕಾವಲ್, ಬೆಂಗಳೂರು
2. ಅಧ್ಯಕ್ಷರು / ಪ್ರಧಾನ ಕಾರ್ಯದರ್ಶಿ, ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (CITU), ಸಂಪಂಗಿರಾಮನಗರ, ಬೆಂಗಳೂರು
3. ಅಧ್ಯಕ್ಷರು / ಪ್ರಧಾನ ಕಾರ್ಯದರ್ಶಿ, ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಕಾಂಗ್ರೆಸ್ (AIUTUC), ಶೇಷಾದ್ರಿಪುರಂ, ಬೆಂಗಳೂರು
4. ಅಧ್ಯಕ್ಷರು / ಪ್ರಧಾನ ಕಾರ್ಯದರ್ಶಿ, ಭಾರತೀಯ ಮಜ್ದೂರ್ ಸಂಘ (BMS), ಕಾಟನ್‌ಪೇಟೆ, ಬೆಂಗಳೂರು
5. ಅಧ್ಯಕ್ಷರು / ಪ್ರಧಾನ ಕಾರ್ಯದರ್ಶಿ, ಹಿಂದ್ ಮಜ್ದೂರ್ ಸಭಾ (HMS), ಆರ್.ಟಿ.ನಗರ, ಬೆಂಗಳೂರು
6. ಅಧ್ಯಕ್ಷರು / ಪ್ರಧಾನ ಕಾರ್ಯದರ್ಶಿ, ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಕಾಂಗ್ರೆಸ್ (AIUTUC), ಮಲ್ಲೇಶ್ವರಂ, ಬೆಂಗಳೂರು
7. ಅಧ್ಯಕ್ಷರು / ಪ್ರಧಾನ ಕಾರ್ಯದರ್ಶಿ, ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ (AICCTU), ಹೂಡಿ, ಬೆಂಗಳೂರು
8. ಅಧ್ಯಕ್ಷರು / ಪ್ರಧಾನ ಕಾರ್ಯದರ್ಶಿ, ಟ್ರೇಡ್ ಯೂನಿಯನ್ಸ್ ಕೋ-ಆರ್ಡಿನೇಷನ್ ಕಮಿಟಿ (TUCC), ಬಸವೇಶ್ವರನಗರ, ಬೆಂಗಳೂರು
9. ಅಧ್ಯಕ್ಷರು / ಪ್ರಧಾನ ಕಾರ್ಯದರ್ಶಿ, ಹಿಂದ್ ಮಜ್ದೂರ್ ಕಿಸಾನ್ ಪಂಚಾಯತ್ (HMKP), ರಿಚ್ಮಂಡ್ ಟೌನ್, ಬೆಂಗಳೂರು

ಆಡಳಿತ ವರ್ಗದವರ ಪ್ರತಿನಿಧಿಗಳು (ಎಲ್ಲರೂ ಸದಸ್ಯರು)
1. ಅಧ್ಯಕ್ಷರು / ಪ್ರಧಾನ ಕಾರ್ಯದರ್ಶಿ ಅಥವಾ ಇವರ ಪ್ರತಿನಿಧಿ, ಫೆಡರೇಷನ್ ಆಫ್ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ (FKCCI), ಕೆ.ಜಿ. ರಸ್ತೆ, ಬೆಂಗಳೂರು
2. ಅಧ್ಯಕ್ಷರು / ಪ್ರಧಾನ ಕಾರ್ಯದರ್ಶಿ ಅಥವಾ ಇವರ ಪ್ರತಿನಿಧಿ, ಕರ್ನಾಟಕ ಸ್ಮಾಲ್ ಸ್ಕೇಲ್ ಇಂಡಸ್ಟ್ರೀಸ್ ಅಸೋಸಿಯೇಷನ್ (KASSIA), ವಿಜಯನಗರ, ಬೆಂಗಳೂರು
3. ಅಧ್ಯಕ್ಷರು / ಪ್ರಧಾನ ಕಾರ್ಯದರ್ಶಿ, ಪೀಣ್ಯ ಇಂಡಸ್ಟ್ರೀಸ್ ಅಸೋಸಿಯೇಷನ್ (PIA), ಪೀಣ್ಯ, ಬೆಂಗಳೂರು
4. ಅಧ್ಯಕ್ಷರು / ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಎಂಪ್ಲಾಯರ್ಸ್ ಅಸೋಸಿಯೇಷನ್ (KEA), ಬಸವನಗುಡಿ, ಬೆಂಗಳೂರು
5. ಅಧ್ಯಕ್ಷರು / ಪ್ರಧಾನ ಕಾರ್ಯದರ್ಶಿ, ದಿ ಕ್ಲಾತಿಂಗ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (CMAI), ಕೆಂಪೇಗೌಡ ರಸ್ತೆ, ಬೆಂಗಳೂರು
6. ಅಧ್ಯಕ್ಷರು / ಪ್ರಧಾನ ಕಾರ್ಯದರ್ಶಿ, ಕಾನ್ಫೆಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ (CII), ಇಂದಿರಾ ನಗರ, ಬೆಂಗಳೂರು
7. ಅಧ್ಯಕ್ಷರು / ಪ್ರಧಾನ ಕಾರ್ಯದರ್ಶಿ, ದಿ ಕರ್ನಾಟಕ ಟೆಕ್ಸ್‌ಟೈಲ್ ಮಿಲ್ಸ್ ಅಸೋಸಿಯೇಷನ್ (KTMA), ಮಲ್ಲೇಶ್ವರಂ, ಬೆಂಗಳೂರು
8. ಅಧ್ಯಕ್ಷರು / ಕಾರ್ಯದರ್ಶಿ, ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಕರ್ನಾಟಕ (ಬೆಂಗಳೂರು) (BAI), ವಸಂತನಗರ, ಬೆಂಗಳೂರು
9. ಅಧ್ಯಕ್ಷರು / ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಪ್ರದೇಶ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ [ರಿ], ಶೇಷಾದ್ರಿಪುರಂ, ಬೆಂಗಳೂರು ಪ್ರಸ್ತುತ ಸಮಿತಿಗೆ ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯದರ್ಶಿ ಕನಿಷ್ಠ ವೇತನ ಕರ್ನಾಟಕ ಸರಕಾರ ಕಾರ್ಯನಿರ್ವಹಿಸಲಿದ್ದಾರೆ.

Related Articles