ವರ್ಗಾವಣೆಗೊಂಡ ಲೋಕೋಪಯೋಗಿ ಇಲಾಖೆ ಎಇಇ ಗೋಪಾಲ್ ರವರಿಗೆ ಬೀಳ್ಕೊಡುಗೆ, ನೂತನ ಎಇಇ ಪೂವಯ್ಯ ರವರಿಗೆ ಸ್ವಾಗತ…

ಸುಳ್ಯ :ಲೋಕೋಪಯೋಗಿ ಇಲಾಖೆ ಸುಳ್ಯ ಉಪ ವಿಭಾಗ ಸಹಾಯಕ ಕಾರ್ಯ ನಿರ್ವಾಹಕ ಅಭಯಂತರರಾಗಿ 3 ವರ್ಷ ಕರ್ತವ್ಯ ನಿರ್ವಹಿಸಿ ವರ್ಗಾವಣೆ ಗೊಂಡು ತೆರಳುತ್ತಿರುವ ಗೋಪಾಲ್ ರವರಿಗೆ ಅಲೆಟ್ಟಿ ಗ್ರಾಮಸ್ಥರ ಪರವಾಗಿ ಪ್ರಮುಖ ಮುಖಂಡರು ಮತ್ತು ಸುಳ್ಯ ನಗರ ಯೋಜನಾ ಪ್ರಾಧಿಕಾರ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸಿ ಬೀಳ್ಕೊಡಲಾಯಿತು.
ಗೋಪಾಲ್ ರವರನ್ನು ಅಭಿನಂದಿಸಿ ಮಾತನಾಡಿದ ಅಲೆಟ್ಟಿ ಗ್ರಾಮ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸತ್ಯಕುಮಾರ್ ಆಡಿoಜ ಅಲೆಟ್ಟಿ – ಬಡ್ಡಡ್ಕ – ಕೂರ್ನಡ್ಕ ರಸ್ತೆ ಅಭಿವೃದ್ಧಿಯ ಬಹು ಕಾಲದ ಬೇಡಿಕೆಗೆ ಇಲಾಖೆ ಯಿಂದ ರೂ 7 ಕೋಟಿ ಮಂಜೂರಾಗಿದೆ. ಇದರಲ್ಲಿ ಇಲಾಖೆ ವತಿಯಿಂದ ಗೋಪಾಲ್ ರವರ ಪ್ರಯತ್ನ ಅಭಿನಂದನಾರ್ಹ. ಇಲಾಖೆಯನ್ನು ಜನ ಸ್ನೇಹಿಯನ್ನಾಗಿಸಿದ ಕೀರ್ತಿ ಗೋಪಾಲರದ್ದು ಎಂದರು.
ಲೋಕೋಪಯೋಗಿ ಇಲಾಖೆ ಸುಳ್ಯ ಉಪ ವಿಭಾಗ ಗಕ್ಕೆ ನೂತನ ಎಇಇ ಆಗಿ ಆಗಮಿಸಿ ಅಧಿಕಾರ ವಹಿಸಿಕೊಂಡ ಪೂವಯ್ಯ ರವರನ್ನು ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ಸುಳ್ಯ ನಗರ ಯೋಜನಾ ಪ್ರಾಧಿಕಾರ ( ಸೂಡ ) ಅಧ್ಯಕ್ಷ ಕೆ. ಎಂ. ಮುಸ್ತಫ, ಆಲೆಟ್ಟಿ ಗ್ರಾಮ ಪಂಚಾಯತ್ ಮಾಜಿ ಸದಸ್ಯರುಗಳಾದ ಗೀತಾ ಕೋಲ್ಚಾರ್,ಧರ್ಮಪಾಲ ಕೊಯಿoಗಾಜೆ, ಮೀನಾಕ್ಷಿ ಕುಡೆಕಲ್ಲು, ಕೇಶವ ಮೊರಂಗಲ್ಲು, ಮಹೇಶ್ ಬೆಳ್ಳಾರ್ಕರ್, ಸಹಾಯಕ ಇಂಜಿನಿಯರ್ ಪರಮೇಶ್ವರ್, ಹಿರಿಯ ಗುತ್ತಿಗೆದಾರ ವೆಂಕಪ್ಪ, ನಿಸಾರ್ ಪೈoಬಚ್ಚಾಲ್, ಹಸೈನಾರ್ ಪೈoಬಚ್ಚಾ ಲ್ ಮೊದಲಾದವರು ಉಪಸ್ಥಿತರಿದ್ದರು.

Whatsapp Image 2026 06 19 At 6.35.57 Pm 300x163

Related Articles