ಬೆಳ್ಳಾರೆ – ಚಾಕಲೇಟ್ ಅಮಿಷವೊಡ್ದಿ ಐದರ ಬಾಲಕಿ ಮೇಲೆ ನಿರಂತರ ಲೈಂಗಿಕ ಕಿರುಕುಳ – ಆರೋಪಿಯ ಬಂಧನ…
ಸುಳ್ಯ: ಚಾಕೋಲೇಟ್ ನ ಆಮೀಷ ಒಡ್ಡಿ ನೆರೆಮನೆಯ ಅಪ್ರಾಪ್ತ ಬಾಲಕಿಯೊರ್ವಳನ್ನು ನಾಲ್ಕು ತಿಂಗಳ ಕಾಲ ಲೈಂಗಿಕವಾಗಿ ಬಳಸಿಕೊಂಡ ಆರೋಪಿಯನ್ನು ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಿಸಿ ಬೆಳ್ಳಾರೆ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬೆಳ್ಳಾರೆ ದರ್ಖಾಸು ನಿವಾಸಿ ಸೆಲ್ವ ಕುಮಾರ್ (50) ಬಂಧಿತ. ಮನೆ ಸಮೀಪದಲ್ಲಿ ಆಟವಾಡುತ್ತಿದ್ದ ನೆರೆಮನೆಯ ಐದರ ಹರೆಯದ ಅಪ್ರಾಪ್ತೆಗೆ ಚಾಕಲೇಟು ನೀಡಿ ಆರೋಪಿ ಪುಸಲಾಯಿಸಿ ತನ್ನ ಮನೆಯೊಳಕ್ಕೆ ಕರೆದೊಯ್ದು ನಾಲ್ಕು ತಿಂಗಳಿನಿಂದ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಜು.28 ರ ಮಂಗಳವಾರ ನಡೆದ ಘಟನೆಯನ್ನು ಬಾಲಕಿ ಹೆತ್ತವರಲ್ಲಿ ತಿಳಿಸಿದ್ದು, ಹೆತ್ತವರು ವಿಚಾರಣೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ. ಅದರಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಆರೋಪಿ ವಿರುದ್ಧ ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.