ಮಂಗಳೂರು – ಎಕ್ಕೂರು ಬಾಬಾ ನಿಧನ….

ಮಂಗಳೂರು: ಹಿಂದೂ ಯುವ ಸೇನೆಯ ಮುಖಂಡ, ಸಾಮಾಜಿಕ ಕಾರ್ಯಕರ್ತ ಶುಭಕರ ಶೆಟ್ಟಿ ಯಾನೆ ಎಕ್ಕೂರು ಬಾಬಾ ನಗರದ ಆಸ್ಪತ್ರೆಯಲ್ಲಿ ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ಸಂಜೆ ನಿಧನರಾದರು.

ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಶುಕ್ರವಾರ ಸಂಜೆ 5 ಗಂಟೆ ಸುಮಾರಿಗೆ ಚಿಕಿತ್ಸೆಗೆ ಸ್ಪಂದಿಸದೆ ನಿಧನರಾದರು ಎಂದು ತಿಳಿದುಬಂದಿದೆ.

ಧಾರ್ಮಿಕ ಹಾಗೂ ಸಾಮಾಜಿಕ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ಅವರು ಹಲವಾರು ವರ್ಷಗಳ ಹಿಂದೆ ಭೂಗತ ಚಟುವಟಿಕೆ ಗಳಲ್ಲಿ ಭಾಗವಹಿಸುತ್ತಿದ್ದು, ನಂತರ ಸಮಾಜದ ಮುಖ್ಯ ವಾಹಿನಿಗೆ ಮರಳಿದ್ದರು. ಮೃತರು ಪತ್ನಿ, ಪುತ್ರ, ಮೂವರು ಸಹೋದರರು, ಸಹೋದರಿ ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಎಕ್ಕೂರು ಬಾಬಾ ಅವರ ತಾಯಿ ಕಳೆದ ವಾರದ ಅನಾರೋಗ್ಯ ಹಿನ್ನೆಲೆಯಲ್ಲಿ ನಿಧನರಾಗಿದ್ದರು.

Mangaluru Former Gangster Yekkur Baba Dead 480x465 1 300x291 WhatsApp Image 2020 08 14 At 6.14.24 PM 1 300x180

 

Related Articles

Leave a Reply

Your email address will not be published. Required fields are marked *