ಪೇರಡ್ಕ ಉರೂಸ್ ಸಮಾರಂಭಕ್ಕೆ ಚಾಲನೆ…

ಸುಳ್ಯ: ಚರಿತ್ರೆ ಪ್ರಸಿದ್ಧವಾದ ವಲಿಯುಲ್ಲಾಹಿ ದರ್ಗಾ ಷರೀಫ್ ಪೇರಡ್ಕದಲ್ಲಿ ವರ್ಷoಪ್ರತಿ ನಡೆಸಿಕೊಂಡು ಬರುತ್ತಿರುವ ಉರೂಸ್ ಸಮಾರಂಭಕ್ಕೆ ಮಾ. 5 ರಂದು ಚಾಲನೆ ನೀಡಲಾಯಿತು.
ಪೇರಡ್ಕ ಜಮಾಅತ್ ಅಧ್ಯಕ್ಷರಾದ ಎಸ್ ಆಲಿ ಹಾಜಿ ದ್ವಜಾರೋಹಣ ಮಾಡುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದರು, ಪೇರಡ್ಕ ಖತೀಬ್ ಉಸ್ತಾದ್ ಸುಹೈಲ್ ದಾರಿಮಿ ದುಹಾ ನೇತೃತ್ವ ವಹಿಸಿದ್ದರು. ಬಳಿಕ ದರ್ಗಾ ಅಲಂಕಾರ ಮತ್ತು ದ್ವಜಾರೋಹಣ
ಕಾರ್ಯಕ್ರಮವನ್ನು ಪೇರಡ್ಕ ಜಮಾಅತ್ ಗೌರವಾಧ್ಯಕ್ಷರಾದ ಟಿ.ಎಂ.ಶಾಹಿದ್ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ರಝಾಕ್ ಹಾಜಿ, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ ಕೆ ಹಮೀದ್, ಇಬ್ರಾಹಿಂ ಕರಾವಳಿ ,ಮಹಮ್ಮದ್ ಕುಂಞ ತೆಕ್ಕಿಲ್, ಸದರ್ ಉಸ್ತಾದ್ ಜಕರಿಯ,ಇಬ್ರಾಹಿಂ ಸೆಟ್ಯಡ್ಕ, ರಿಯಾಝ್ ಕಲ್ಲುಗುಂಡಿ,ಎನ್ ಎಚ್ ಹಾರೀಸ್,ಮುನೀರ್ ದಾರಿಮಿ, ಪಾಂಡಿ ಅಬ್ಬಾಸ್, ಐ ಜಿ . ಇಸ್ಮಾಯಿಲ್, ಅಶ್ರಫ್ ತರ್ಲಿ, ಬಶೀರ್ ತೆಕ್ಕಿಲ್, ಪಿ. ಕೆ. ಉಮ್ಮರ್, ಕಾದರ್ ಮೊಟ್ಟೆ0ಗಾರ್, ಅಶ್ರಫ್ ಟರ್ಲಿ, MRDA ಅಧ್ಯಕ್ಷ ಝಕೀರ್ ಹುಸೈನ್ ಶಾಫಿ ಕಲ್ಲುಗುಂಡಿ ಉಪಸ್ಥಿತರಿದ್ದರು.

78092677 144d 4ac8 8cb8 902d21518be8 300x225

B0ef5f18 630a 4826 820f 7c261dd22da4 300x225

2bf89aa3 2f14 4d45 Ac67 351203c6d70a 300x225

Related Articles

Leave a Reply

Your email address will not be published. Required fields are marked *