ಸುಳ್ಯ – ‘ಹಸಿರು ನಾವೂರು’ ಕಾರ್ಯಕ್ರಮಕ್ಕೆ ರಮಾನಾಥ ರೈ ಅವರಿಂದ ಚಾಲನೆ…

ಸುಳ್ಯ: ವಿಶ್ವ ಪರಿಸರ ದಿನವಾದ ಜೂ.5ರಂದು ನಗರ ಪಂಚಾಯತ್‌ ನ ನಾವೂರು ವಾರ್ಡ್‌ನಲ್ಲಿ ಮರ ಗಿಡಗಳನ್ನು ಬೆಳೆಸುವ ಹಸಿರು ನಾವೂರು ಕಾರ್ಯಕ್ರಮಕ್ಕೆ ಮಾಜಿ ಸಚಿವ ಬಿ.ರಮಾನಾಥ ರೈ ಚಾಲನೆ ನೀಡಿದರು.
ನಗರ ಪಂಚಾಯತ್‌ ಸದಸ್ಯ ಶರೀಫ್‌ ಕಂಠಿಯವರಿಗೆ ರಮಾನಾಥ ರೈ ಅವರು ಗಿಡವನ್ನು ಹಸ್ತಾಂತರಿಸುವ ಮೂಲಕ ಹಸಿರು ನಾವೂರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ, ಕಾಂಗ್ರೆಸ್ ಮುಖಂಡರಾದ ಟಿ. ಎಂ. ಶಾಹಿದ್, ಭರತ್ ಮುಂಡೋಡಿ, ಡಾ.ರಘು, ಎಂ. ವೆಂಕಪ್ಪ ಗೌಡ, ಕಳಂಜ ವಿಶ್ವನಾಥ ರೈ, ಎಸ್. ಸಂಶುದ್ದೀನ್ ಮೊದಲಾದವರು ಉಪಸ್ಥಿತರಿದ್ದರು.
ನಂತರ ನಾವೂರು ವಾರ್ಡ್ ನ. ಪಂ. ಸದಸ್ಯ ಶರೀಫ್‌ ಕಂಠಿ ನೇತೃತ್ವದಲ್ಲಿ ವಾರ್ಡ್‌ನಲ್ಲಿ ಅಲ್ಲಲ್ಲಿ ಗಿಡಗಳನ್ನು ನೆಟ್ಟು ಹಸಿರು ನಾವೂರು ಯೋಜನೆಯನ್ನು ಆರಂಭಿಸಲಾಯಿತು. ರಜಾಕ್ , ಹನೀಫ್‌ ಬೀಜಕೊಚ್ಚಿ , ಹಮೀದ್‌ ಚಾಯ್ಸ್‌, ಆಸೀಫ್‌, ಹಬೀಬ್‌, ಮುಸ್ತಾಫ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

3b0c8b2b C391 4661 Afe4 830db40930c0 225x300

F61aaef5 Bb22 46fc 896b 3f7c02ede275 300x173

Related Articles