ಶ್ರೀ ಕಲ್ಲುರ್ಟಿ ಕಲ್ಕುಡ ದೈವಸ್ಥಾನ ಕುಂಜತ್ತಬೈಲು ಸಜೀಪನಡು -ನೂತನ ದೇವಸ್ಥಾನಕ್ಕೆ ಶಿಲಾನ್ಯಾಸ…

ಉಳ್ಳಾಲ: ಸಜೀಪಮಾಗಣೆ ಶ್ರೀ ಕಲ್ಲುರ್ಟಿ ಕಲ್ಕುಡ ದೈವಸ್ಥಾನ ಕುಂಜತ್ತಬೈಲು ಸಜೀಪನಡು ಉಳ್ಳಾಲ ತಾಲ್ಲೂಕು ಜೀರ್ಣೋದ್ಧಾರದ ಅಂಗವಾಗಿ ನೂತನ ದೇವಸ್ಥಾನ ನಿರ್ಮಾಣ ಮಾಡಲು ಬ್ರಹ್ಮಶ್ರೀ ನೀಲೇಶ್ವರ ಕೆ ಉಚ್ಚಿಲತಾಯ ಪದ್ಮನಾಭ ತಂತ್ರಿಗಳ ಹಾಗೂ ವಾಸ್ತು ಶಾಸ್ತ್ರಜ್ಞ ಮುನಿಯಂಗಳ ಪ್ರಸಾದ್ ಭಟ್ ಮಾರ್ಗದರ್ಶನದಲ್ಲಿ ಜೂ.19 ರಂದು ಸಜಿಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶಿಲಾನ್ಯಾಸ ನೆರವೇರಿಸಲಾಯಿತು.
ಸಜೀಪಗುತ್ತು ಗಡಿ ಪ್ರಧಾನರಾದ ಮುಂಡಪ್ಪ ಶೆಟ್ಟಿ ಯಾನೆ ಕೋಚು ಭಂಡಾರಿ, ಶಂಕರ ಪೂಜಾರಿ ಯಾನೆ ಕೋಚು ಪೂಜಾರಿ, ವೆಂಕಪ್ಪ ಪೂಜಾರಿ, ದಯಾನಂದ ಯಾನೆ ಕುಂಛ ಪೂಜಾರಿ, ಯಶವಂತ ದೇರಾಜೆ ಗುತ್ತು, ಹರೀಶ್ ಬಂಗೇರ, ದೇವಿ ಪ್ರಸಾದ್ ಪೂಂಜಾ, ಬಾಲಕೃಷ್ಣ ಅರಸ, ಸುರೇಶ್ ಪೂಜಾರಿ, ನಿತಿನ್ ಅರಸ, ಸುರೇಶ ಬಂಗೇರ, ಸಚಿಂದ್ರ ಬೆಲ್ಚಡ, ಸುಧಾಕರ ಕೆ ಟಿ, ಭಾಸ್ಕರ, ದಿನೇಶ, ಪ್ರೀತಮ್ ಮೊದಲಾದವರು ಉಪಸ್ಥಿತರಿದ್ದರು.

IMG 20220619 WA0003 300x135

Related Articles