ಮಹಾವೀರ ಜಯಂತಿ ಉತ್ಸವ ಆಚರಣೆ…

ಬಂಟ್ವಾಳ, ಮಾ.30 :ಮಹಾವೀರ ಜನ್ಮ ಕಲ್ಯಾಣ ಮಹೋತ್ಸವಕ್ಕೆ ಬಂಟ್ವಾಳ ತಹಸಿಲ್ದಾರರ ಕಚೇರಿಯಲ್ಲಿ ಮಹಾವೀರ ತೀರ್ಥಂಕರರ ಭಾವಚಿತ್ರಕ್ಕೆ ದೀಪ ಬೆಳಗುವ ಮೂಲಕ ಚಾಲನೆ ನೀಡಲಾಯಿತು.
ಮುಖ್ಯ ಭಾಷಣಕಾರರಾಗಿ ನ್ಯಾಯವಾದಿ ಶಿವಪ್ರಕಾಶ್ ಮಾತನಾಡಿ ಮಹಾವೀರನ ಜೀವನ ಸಂದೇಶವನ್ನು ತಿಳಿಸಿದರು. ಜೈನ್ ಮಿಲನ್ ಅಧ್ಯಕ್ಷರಾದ ರಾಜೇಂದ್ರ ಜೈನ್ ಮಾತನಾಡಿ ಜೈನ ಧರ್ಮ ಬೆಳೆದುಬಂದ ರೀತಿ ಮತ್ತು ಮಹಾವೀರರ ಅಹಿಂಸಾ ಮಾರ್ಗದ ಬಗ್ಗೆ ತಿಳಿಸಿ ಬದುಕಿ ಬದುಕಲು ಬಿಡಿ ಎಂಬ ತತ್ವವನ್ನು ಪಾಲಿಸಬೇಕೆಂದರು.ಜೈನ್ ಮಿಲನ್ ವಲಯ ಉಪಾಧ್ಯಕ್ಷ ಸುದರ್ಶನ ಜೈನ್ ಶುಭ ಹಾರೈಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಡಿ. ಮಂಜುನಾಥ್ ಸಾಂದರ್ಭಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಜಯಕೀರ್ತಿ ವಂದಿಸಿದರು. ಜೈನ್ ಮಿಲನ್ ಶ್ರಾವಕ ಶ್ರಾವಕಿಯರು ಭಾಗವಹಿಸಿದ್ದರು ನವೀನ್ ಡೆಪ್ಯೂಟಿ ತಹಶೀಲ್ದಾರ ಕಾರ್ಯಕ್ರಮ ಸಂಯೋಜನೆ ಮಾಡಿದರು. ಸನ್ಮತಿ‌, ಜಯಶಾಮಲ ಪ್ರಾರ್ಥನೆ ನಡೆಸಿಕೊಟ್ಟರು.

whatsapp image 2026 03 30 at 3.50.25 pm (1)

Related Articles

Back to top button