ದ.ಕ. ಜಿಲ್ಲಾ ಸಾಹಿತ್ಯ ಸಮ್ಮೇಳನ 12 ಕೃತಿಗಳ ಬಿಡುಗಡೆ…
ಕನ್ನಡ ಪುಸ್ತಕಗಳು ಯಾವತ್ತಿಗೂ ಪ್ರಸ್ತುತ – ಡಾ. ಚಿನ್ನಪ್ಪ ಗೌಡ...
ಬಂಟ್ವಾಳ :ಲೇಖಕರಿಗೆ ತಮ್ಮ ಕೃತಿ ಪ್ರಕಟವಾದಾಗ ಆತ್ಮ ಸಂತೃಪ್ತಿ ಸಿಗುತ್ತದೆ. ಪುಸ್ತಕ ಬದುಕಿಗೆ ಕಾರಣಕರ್ತರಾದ ಲೇಖಕರು, ಪ್ರಕಾಶಕರು, ಓದುಗರು ಮುಖ್ಯವಾಗಿದ್ದು ಕನ್ನಡ ಪುಸ್ತಕಗಳು ಯಾವತ್ತಿಗೂ ಪ್ರಸ್ತುತವೇ ಆಗಿರುತ್ತವೆ ಎಂದು ವಿಶ್ರಾಂತ ಕುಲಪತಿ ಫ್ರೊ. ಕೆ ಚಿನ್ನಪ್ಪ ಗೌಡ ಹೇಳಿದರು.
ಅವರು ಸ್ಪರ್ಶಾ ಕಲಾಕೇಂದ್ರ ಬಿಸಿರೋಡಿನಲ್ಲಿ ದ.ಕ. ಜಿಲ್ಲಾ 28ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನೂತನ ಕೃತಿಗಳ ಲೋಕಾರ್ಪಣೆ ಮಾಡಿ ಮಾತನಾಡಿದರು.
ಸುಲೋಚನ ಪುತ್ತೂರು ರವರ ಸಖಿ ವಚನ, ಉಮಾಶಂಕರಿ ಮರಿಕೆಯವರ ಅವಳ ಅಂತರಂಗ, ಜಯಪ್ರಕಾಶ್ ಪುತ್ತೂರುರವರ ವ್ಯಕಿತ್ವ ವಿಕಸನ ವಿಚಾರಧಾರೆ , ವಿಮಲಾರುಣ ಪಡ್ಡಂಬೈಲು ಅವರ ಗಿರಿಕರ್ಣಿಕೆ , ಎಂ. ಅಶೀರುದ್ದೀನ್ ಸಾರ್ತಬೈಲ್ ಅವರ ಪಾಸ, ನಾರಾಯಣ ನೀರಬಿದಿರೆ ಸುಳ್ಯ ಅವರ ಮೂರ್ನಾಟಕಗಳು ಮತ್ತು ಪ್ರಶ್ನೋತ್ತರಗಳು, ಅಕ್ಷತಾ ನೀರಬಿದ್ರೆಯವರ ಸಂಭಾಷಣೆ , ಆಕೃತಿ ಐ.ಎಸ್. ಭಟ್ ರವರ ಸ್ಪೂರ್ತಿಯ ಸೆಲೆ, ಸಂಪ್ರೀತಾ ಎಸ್. ಶೆಟ್ಟಿಗಾರ್ ರವರ ಅಂತರಾಳದ ಧ್ವನಿ, ಡಾ. ಟಿ. ಕೆ ಕೃಷ್ಣ ಮೂರ್ತಿ ಉಜಿರೆ ರವರ ಪರಿವರ್ತನೆ ಮತ್ತು ಕಸ ಪುರಾಣ ಕೃತಿಗಳನ್ನು ತೊಟ್ಟಿಲಿನಲ್ಲಿಟ್ಟು ಬಿಡುಗಡೆಗೊಳಿಸಲಾಯಿತು.
ಸಮ್ಮೇಳನಾಧ್ಯಕ್ಷ ಚಿದಂಬರ ಬೈಕಂಪಾಡಿ , ಕ.ಸಾ.ಪ.ದ ಜಿಲ್ಲಾಧ್ಯಕ್ಷ ಡಾ. ಎಮ್. ಪಿ. ಶ್ರೀನಾಥ್ , ವಿಜಯಲಕ್ಷ್ಮೀ ಶೆಟ್ಟಿ, ಕಲ್ಲೂರು ನಾಗೇಶ್ ಮಂಗಳೂರು, ಡಾ.ಧನಂಜಯ ಕುಂಬ್ಳೆ ಉಳ್ಳಾಲ ಉಪಸ್ಥಿತರಿದ್ದರು.
ಗೀತಾ ಕೊಂಕೋಡಿ, ರಜನಿ ಚಿಕ್ಕಯ್ಯಮಠ ನಿರೂಪಿಸಿ ವಂದಿಸಿದರು.
ಡಿ.ವಿ.ಜಿ. ಯವರ ಕಗ್ಗ ರಸಧಾರೆ…
ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ. ಪ್ರದೀಪ್ ಆಟಿಕುಕ್ಕೆ ನಾವೂರು ಅವರು ಡಿವಿಜಿ ಯವರ ಮಂಕುತಿಮ್ಮನ ಕಗ್ಗದ ಕಗ್ಗಗಳನ್ನು ಉದಾಹರಿಸಿ ಹಲವು ರಸವತ್ತಾದ ಭಾಗಗಳನ್ನು ವಿಮರ್ಶಿಸಿದರು. ಸರಪಾಡಿ ಅಶೋಕ ಶೆಟ್ಟಿ , ತುಳಸಿ ಪುರಂದರ ಇರಾ ಉಪಸ್ಥಿತರಿದ್ದರು. ಅಬ್ದುಲ್ ಮಜೀದ್ ಎಸ್ ನಿರೂಪಿಸಿದರು.
ದ.ಕ. .ಜಿಲ್ಲೆಯ ಸಾಹಿತ್ಯ ಸಂಸ್ಕೃತಿ…
ದ.ಕ. ಜಿಲ್ಲೆಯ ಸಾಹಿತ್ಯ ಸ್ಥಿತ್ಯಂತರಗಳು ಕುರಿತು ಸುಳ್ಯ ನೆಹರು ಮೆಮೋರಿಯಲ್ ಕಾಲೇಜಿನ ಪ್ರಾಧ್ಯಾಪಕಿ ಡಾ. ಅನುರಾಧ ಕುರುಂಜಿ ಮತ್ತು ಮೊಯ್ಲಾಂಜಿ ಪತ್ರಿಕೆ ಪ್ರಧಾನ ಸಂಪಾದಕ ಕೆ.ಎಮ್ ಅಬೂಬಕ್ಕರ್ ಸಿದ್ದೀಕ್ ಮೊಂಟುಗೋಳಿ ಮಾತನಾಡಿದರು.
ಉಮೇಶ್ ಸಾಲ್ಯಾನ್ ಬೆಂಜನಪದಚವು , ಆನಂದ ಭಂಡಾರಿ ಹೊಸಬೆಟ್ಟು, ಡಿ. ಯದುಪತಿ ಗೌಡ ಬೆಳ್ತಂಗಡಿ ಉಪಸ್ಥಿತರಿದ್ದರು. ಜನಾರ್ದನ ಅಮ್ಮುಂಜೆ ನಿರೂಪಿಸಿದರು.
ಕವನವಾಚನ – ಗಾಯನ – ಕುಂಚ…
ರಾಜೇಶ್ರೀ ರೈ ಪೆರ್ಲ, ಡಾ. ಗೀತಾ ಎನ್ ನರಿಕೊಂಬು, ಕಿಶೋರ್ ಕುಮಾರ್ ರಾಮಕುಂಜ ,ಮಮತಾ ರವೀಶ್ ಪಡ್ಡಂಬೈಲು ,ಅನಿತಾ ಶೆಟ್ಟಿ, ಸುಮಾ ಉಜಿರೆ, ಸೌದಾಮಿನಿ ಶೆಟ್ಟಿ ಎಳತ್ತೂರು, ಶ್ರೀಶ ವಾಸವಿ, ರವಿರಾಜ ಎಸ್ ಮಂಗಳೂರು, ಸ್ವರಚಿತ ಕವನ ವಾಚಿಸಿದರು.
ಕೆ.ಆರ್. ಗೋಪಾಲಕೃಷ್ಣ ಸುಳ್ಯ, ಭಾಗ್ಯಶ್ರೀ ಕಾಂಚನ , ಸ್ವರಸಂಯೋಜನೆ ಮಾಡಿ ಹಾಡಿದರು.
ಡಾ. ಜಯಪ್ರಕಾಶ್ ಮಂಗಳೂರು, ಭಾಸ್ಕರ ನೆಲ್ಯಾಡಿ ಮೂಡಬಿದಿರೆ, ಜಯಶ್ರೀ ಶರ್ಮ ಮಂಗಳೂರು, ಕುಂಚ ಹಿಡಿದು ಚಿತ್ರ ಬಿಡಿಸಿದರು. ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷ ಚಿದಂಬರ ಬೈಕಂಪಾಡಿ ಉಪಸ್ಥಿತರಿದ್ದು ಹೆಚ್.ಕೆ ನಯನಾಡು ನಿರೂಪಿಸಿದರು.
ನುಡಿನಮನ..
ಅಗಲಿದ ಗಣ್ಯರಿಗೆ ನಿವೃತ್ತ ಮುಖ್ಯೋಪಾಧ್ಯಾಯ ಮಹಾಬಲೇಶ್ವರ ಹೆಬ್ಬಾರ್ ನುಡಿನಮನ ಸಲ್ಲಿಸಿದರು. ಅಬ್ದುಲ್ ರಹಿಮಾನ್ ಡಿ.ಬಿ. ನಿರೂಪಿಸಿದರು.




