ಡಾ|| ಯಾಜಿ ದಿವಾಕರ ಭಟ್ ಅವರಿಗೆ ಎರಡನೆಯ ಡಾಕ್ಟರೇಟ್ ಪದವಿ…

ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾನಿಲಯ, ಶ್ರೀನಿವಾಸನಗರ, ಮುಕ್ಕ, ಮಂಗಳೂರು ಇಲ್ಲಿ “ಯೋಗ-ಸಂಸ್ಕೃತಾಧ್ಯಯನ ಮತ್ತು ಸಂಶೋಧನಾ ಕೇಂದ್ರ” ದಲ್ಲಿ ಪ್ರೊಫ಼ೆಸರ್ – ಗೈಡ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ|| ಯಾಜಿ ದಿವಾಕರ ಭಟ್ ಅವರು ಡಾ|| ಕಡಂದಲೆ ಗಣಪತಿ ಭಟ್ಟರ ಮಾರ್ಗದರ್ಶನದಲ್ಲಿ ಸಲ್ಲಿಸಿದ “ ಅಷ್ಟೋತ್ತರಶತ-ಉಪನಿಷದನುಸಾರೇಣ ಚತುರ್ವಿಧ ಪುರುಷಾರ್ಥಾನಾಂ ಪರಿಚಯಾತ್ಮಕಂ ಏವಂ ವಿಶ್ಲೇಷಣಾತ್ಮಕಂ ಅಧ್ಯಯನಮ್ || “ ಎಂಬ ಸಂಸ್ಕೃತ ಮಹಾಪ್ರಬಂಧಕ್ಕೆ ಮಾ.28 ರಂದು ವಿಶ್ವವಿದ್ಯಾಲಯದಲ್ಲಿ ಸಂಪನ್ನಗೊಂಡ ಘಟಿಕೋತ್ಸವದಂದು ಡಾಕ್ಟರೇಟ್ ಪದವಿಯನ್ನಿತ್ತು ಗೌರವಿಸಲಾಗಿದೆ .
ಇವರು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಗ್ರಂಥಪಾಲಕರಾಗಿ 35 ವರ್ಷಗಳ ಸುದೀರ್ಘ ಸೇವೆಯಲ್ಲಿದ್ದರು . 2007ರ ಮಂಗಳೂರು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನದಲ್ಲಿ ತಮ್ಮ ಪ್ರಥಮ ಡಾಕ್ಟರೇಟನ್ನು ಪಡೆದಿದ್ದು, ಸರ್ ಎಂ. ವಿಶ್ವೇಶ್ವರಯ್ಯ ಟೆಕ್ನೊಲೋಜಿಕಲ್ ವಿಶ್ವವಿದ್ಯಾಲಯ, ಬೆಳಗಾವಿ ಇಲ್ಲಿ ಗ್ರಂಥಾಲಯ ಮತ್ತು ಮಾಹಿತಿವಿಜ್ಞಾನ ವಿಭಾಗದಲ್ಲಿ ಮಾರ್ಗದರ್ಶನ ಮಾಡುವರೇ ನೇಮಕಗೊಂಡು 2020ರಲ್ಲಿ ಒಬ್ಬ ವಿದ್ಯಾರ್ಥಿಗೆ ಪಿ ಯಚ್ ಡಿ ಪದವಿಯನ್ನು ಕೊಡಿಸಿದ್ದಾರೆ.
ಪ್ರಸ್ತುತ 7 ವಿದ್ಯಾರ್ಥಿಗಳಿಗೆ ಮಾರ್ಗದರ್ಶನಗೈಯುತ್ತಿರುವ ಇವರು ಪಾವಂಜೆ, ಕೋಡಿಮನೆ, ಲಕ್ಷ್ಮೀನಾರ್ಣಪ್ಪಯ್ಯ ಮತ್ತು ಶಾರದಮ್ಮ ಇವರ ಆರನೆಯ ಮಗನಾಗಿ, ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ತಂತ್ರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Related Articles

Back to top button