ಟಿ ಎಂ ಶಾಹಿದ್ ತೆಕ್ಕಿಲ್ ಕೇರಳ ರಾಜ್ಯದಲ್ಲಿ ಬಿರುಸಿನ ಪ್ರಚಾರ…
ಸುಳ್ಯ: ಕರ್ನಾಟಕ ರಾಜ್ಯ ಸರಕಾರದ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್ ಕೇರಳ ವಿಧಾನ ಸಭಾ ಚುನಾವಣೆಯಲ್ಲಿ ಕ್ಯಾಲಿಕಟ್ ಜಿಲ್ಲೆಯ ಎಲ್ಲಾ ಅಭ್ಯರ್ಥಿಗಳು ಗೆಲ್ಲುವ ನಿಟ್ಟಿನಲ್ಲಿ ಒಟ್ಟು ಒಂಬತ್ತು ವಿಧಾನಸಭಾ ಕ್ಷೇತ್ರದಲ್ಲಿ ಬಿರುಸಿನ ಚುನಾವಣಾ ಪ್ರಚಾರ ನಡೆಸಿದರು.
ಮುಂದಿನ ಕೇರಳ ಸರಕಾರದಲ್ಲಿ ಕನಿಷ್ಠ ವೇತನ ಹೆಚ್ಚಿಸಲು ಸಹಾಯಕ ಮತ್ತು ಐದು ಗ್ಯಾರಂಟಿ ಕರ್ನಾಟಕದಲ್ಲಿ ಯಶಸ್ವಿಯಾಗಿ ಜಾರಿಗೆ ತಂದ ಬಗ್ಗೆ ಮುಂದೆ ಕೇರಳ ರಾಜ್ಯದಲ್ಲಿ ಈ ಯೋಜನೆ ಹೇಗೆ ಸಾದ್ಯ ಎಂಬುದನ್ನು ವಿವರಿಸಿ ಕೇಂದ್ರ ಮತ್ತು ಕೇರಳ ರಾಜ್ಯ ಸರಕಾರದ ಕಾರ್ಮಿಕ ಕಾನೂನಿನ ಬಗ್ಗೆ ವಿವರಿಸಿ, ಮುಂದೆ ಯು ಡಿ ಎಫ್ ಸರಕಾರ ಬರಬೇಕಾದ ಅಗತ್ಯತೆ ಬಗ್ಗೆ ಮತದಾರರಿಗೆ ವಿನಂತಿಸಿದರು. ಈ ಸಂದರ್ಭದಲ್ಲಿ ಪೆರಾಂಬ್ರ ವಿಧಾನಸಭಾ ಅಭ್ಯರ್ಥಿ ನ್ಯಾಯವಾದಿ ಫಾತಿಮ ತಹ್ಲಿಯ ಕೊತಂಬ್ರ ಮೊಯ್ದಿನ್, ರಮೇಶ್, ಸದಾನಂದನ್ ಮೊದಲಾದವರು ಉಪಸ್ಥಿತರಿದ್ದರು.






