ಚೆಲನ್ನೂರ್ ಕಾಂಗ್ರೆಸ್ ಚುನಾವಣೆ ಪ್ರಚಾರ…
ಯು ಡಿ ಎಫ್ ಅಧಿಕಾರಕ್ಕೆ ಬರುವುದುದು ಗ್ಯಾರೆಂಟಿ, ಜೊತೆಯಲ್ಲಿ ಗ್ಯಾರಂಟಿ ಯೋಜನೆ ಕೇರಳದಲ್ಲಿ ಜಾರಿಗೆ ಬರುವುದು ಗ್ಯಾರಂಟಿ ಟಿ ಎಂ ಶಾಹಿದ್ ತೆಕ್ಕಿಲ್...
ಚೆಲನ್ನೂರ್ :ಕರ್ನಾಟಕ ರಾಜ್ಯ ಸರಕಾರದ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್ ಕ್ಯಾಲಿಕಟ್ ಜಿಲ್ಲೆಯ ಚೆಲನ್ನೂರ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಯೂಡಿಎಫ್ ಸರಕಾರದ ಬರುವುದು ಗ್ಯಾರಂಟಿ, ಅದರ ಜೊತೆಯಲ್ಲಿ ಕೇರಳ ಕಾಂಗ್ರೆಸ್ ಗ್ಯಾರಂಟಿಗಳಾದ ಇಪ್ಪತ್ತೈದು ಲಕ್ಷ ಮೊತ್ತದ ಉಮ್ಮನ್ ಚಾಂಡಿ ಆರೋಗ್ಯ ಇನ್ಷೂರೆನ್ಸ್ , ಮಹಿಳೆಯರಿಗೆ ಉಚಿತ ಪ್ರಯಾಣ ,ನಿರುದ್ಯೋಗಿ ಯುವಕರಿಗೆ ಐದು ಲಕ್ಷ ಬಡ್ಡಿ ರಹಿತ ಸಾಲ, ಹಿರಿಯರಿಗೆ ಸುರಕ್ಷತೆಗೆ ವಿಶೇಷ ಇಲಾಕೆ, ವಿದ್ಯಾರ್ಥಿನಿಯರಿಗೆ ಒಂದು ಸಾವಿರ ರೂಪಾಯಿ ಗ್ಯಾರಂಟಿ ಘೋಷಿಸಿದ್ದು ಅದು ಕಾರ್ಯಗತವಾಗುವುದು ಗ್ಯಾರಂಟಿ ಎಂದು ಭರವಸೆ ನೀಡಿದರು.
ಸಭೆಯಲ್ಲಿ ಬ್ಲಾಕ್ ಅಧ್ಯಕ್ಷರಾದ ಹರಿದಾಸ್ ಕುರುಪ್ ಸುಜಾತಾ ಶಿವರಾಮನ್ ,ಸೌದ ರಹ್ಮಾನ್ ರಾಜೇಶ್ ಅಭಿಲಾಷ್ ಮೊದಲಾದವರು ಉಪಸ್ಥಿತರಿದ್ದರು.






