ಕೇರಳ ರಾಜ್ಯ ಅಂಗನವಾಡಿ ಮತ್ತು ಕ್ರಶ್ ವರ್ಕರ್ಸ್ ಯೂನಿಯನ್ (ಐ ಎನ್ ಟಿ ಯು ಸಿ)ಕ್ಯಾಲಿಕಟ್ ಜಿಲ್ಲಾ ಸಮ್ಮೇಳನ…

ಕ್ಯಾಲಿಕಟ್: ಕೇರಳ ರಾಜ್ಯ ಅಂಗನವಾಡಿ ಮತ್ತು ಕ್ರಶ್ ವರ್ಕರ್ಸ್ ಯೂನಿಯನ್ (ಐ ಎನ್ ಟಿ ಯು ಸಿ)ಕ್ಯಾಲಿಕಟ್ ಜಿಲ್ಲಾ ಸಮ್ಮೇಳನವನ್ನು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕರ್ನಾಟಕ ರಾಜ್ಯ ಸರಕಾರದ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್ ಉದ್ಘಾಟಿಸಿ ಮಾತನಾಡಿ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ ಸ್ಥಾನಗಳನ್ನು ಗೆಲ್ಲುವ ನಿಟ್ಟಿನಲ್ಲಿ ಅಂಗನವಾಡಿ ಮತ್ತು ಕ್ರಶ್ ಕಾರ್ಮಿಕರು ದುಡಿಯಲು ವಿನಂತಿಸಿ ಮುಂದಿನ ಯೂಡಿಎಫ್ ಸರಕಾರದಲ್ಲಿ ನಿಮ್ಮ ಕನಿಷ್ಠ ವೇತನ ಹೆಚ್ಚಿಸಲು ಸಹಕಾರಿಯಾಗಲಿದೆ ಮತ್ತು ನಿಮ್ಮ ಜೊತೆ ಪಕ್ಷ ಮತ್ತು ಸರಕಾರ ಇರಲಿದೆ ಎಂದು ಭರವಸೆ ನೀಡಿದರು. ನಿವೃತ್ತರಾದ ಅಂಗನವಾಡಿ ಕಾರ್ಯಕರ್ತರಿಗೆ ಸನ್ಮಾನ ಮತ್ತು ಗೌರವ ಸಲ್ಲಿಸಿದರು. ಸಮಾರಂಭದಲ್ಲಿ ರಜನಿ ಟೀಚರ್ ಅಧ್ಯಕ್ಷತೆ ವಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷೆ ಸೌಮ್ಯ,ರಾಜ್ಯ ಕಾರ್ಯದರ್ಶಿ ಕರ್ತ್ಯಾಯನಿ ಟೀಚರ್,ಜಿಲ್ಲಾ ಕಾರ್ಯದರ್ಶಿ ನುಸ್ರತ್ ,ಬ್ಲಾಕ್ ಅಧ್ಯಕ್ಷೆ ಪಿ ವಿ ಚಂದ್ರಿಕ ,ರಾಜ್ಯ ಸಮಿತಿ ಸದಸ್ಯೆ ಮಾಯ ಪ್ರದೀಪ್ ಮೊದಲಾದವರು ಉಪಸ್ಥಿತರಿದ್ದರು.

whatsapp image 2026 03 29 at 7.57.04 pm

whatsapp image 2026 03 29 at 7.57.28 pm

whatsapp image 2026 03 29 at 7.57.31 pm

Related Articles

Back to top button