ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು – ರಾಷ್ಟ್ರ ಮಟ್ಟದ ತಂತ್ರಜ್ಞಾನ ಮೇಳ ಆಂತರ್ಯ-2026…
ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಎಂಸಿಎ ವಿಭಾಗದ ಆಶ್ರಯದಲ್ಲಿ ರಾಷ್ಟ್ರ ಮಟ್ಟದ ತಂತ್ರಜ್ಞಾನ ಮೇಳ ಆಂತರ್ಯ2-2026 ವಿಜೃಂಭಣೆಯಿಂದ ನಡೆಯಿತು.
ಸಾವರ್ಕರ್ ಸಭಾ ಭವನದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಬೆಂಗಳೂರಿನ ಎಕ್ಸ್ ಫೇಕ್ಟರ್ ಸಾಫ್ಟ್‍ವೇರ್ಸ್ ಪ್ರೈವೆಟ್ ಲಿಮಿಟೆಡ್‍ನ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಎಂಡ್ ಮೆಷಿನ್ ಲರ್ನಿಂಗ್ ವಿಭಾಗದ ಮುಖ್ಯಸ್ಥ ಶರತ್ ಕುಮಾರ್.ಎ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ರವಿಕೃಷ್ಣ.ಡಿ.ಕಲ್ಲಾಜೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕ ಸತ್ಯನಾರಾಯಣ ಭಟ್, ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ, ಎಂಸಿಎ ವಿಭಾಗದ ನಿರ್ದೇಶಕಿ ಡಾ.ಜೋತಿಮಣಿ.ಕೆ, ಕಾರ್ಯಕ್ರಮ ಸಂಯೋಜಕಿ ಡಾ.ರಾಜೇಶ್ವರಿ.ಎಂ, ವಿದ್ಯಾರ್ಥಿ ಸಂಯೋಜಕರಾದ ಆದಿತ್ಯ ಮತ್ತು ಹವ್ಯಾಸ್ ವೇದಿಕೆಯಲ್ಲ್ಲಿ ಉಪಸ್ಥಿತರಿದ್ದರು.
18 ಕಾಲೇಜುಗಳ 228 ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಂಡರು. ಕೋಡಿಂಗ್, ವೆಬ್ ಡಿಸೈನ್, ಐಟಿ ಕ್ವಿಝ್, ಐಡಿಯಥಾನ್, ಐಟಿ ಮ್ಯಾನೇಜರ್, ಟ್ರೆಜರ್ ಹಂಟ್, ಗೇಮಿಂಗ್, ರೀಲ್ಸ್ ಮೇಕಿಂಗ್, ಡ್ಯಾನ್ಸ್ ಹೀಗೆ 9 ಬಗೆಯ ಆಕರ್ಷಕ ಸ್ಪರ್ಧೆಗಳು ಇಲ್ಲಿ ನಡೆದವು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಇಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕಿ ಶ್ರೀಮತಿ.ವಿದ್ಯಾ.ಆರ್.ಗೌರಿ ಬಹುಮಾನ ವಿತರಣೆ ಮಾಡಿದರು. ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ ಉಪಸ್ಥಿತರಿದ್ದರು.
ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಆಟ್ರ್ಸ್ ಸೈನ್ಸ್ ಎಂಡ್ ಕಾಮರ್ಸ್‍ನ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿಯನ್ನು ಗೆದ್ದುಕೊಂಡರು. ಮಂಗಳೂರಿನ ಕೆನರಾ ಕಾಲೇಜಿನ ವಿದ್ಯಾರ್ಥಿಗಳು ರನ್ನರ್ ಅಪ್ ಪ್ರಶಸ್ತಿಯನ್ನು ಗಳಿಸಿಕೊಂಡರು.
ಎಂಸಿಎ ವಿಭಾಗದ ನಿರ್ದೇಶಕಿ ಡಾ.ಜೋತಿಮಣಿ ಸ್ವಾಗತಿಸಿ, ಕಾರ್ಯಕ್ರಮ ಸಂಯೋಜಕಿ ಡಾ.ರಾಜೇಶ್ವರಿ ವಂದಿಸಿದರು. ಪ್ರೊ .ನಿಮಾ.ಎಚ್, ಪ್ರೊ .ರಮೇಶ.ಕೆ, ಪ್ರೊ .ಅನಿಲ್ ಕುಮಾರ್.ಕೆ, ಪ್ರೊ .ಅನಿರುದ್ಧ.ಬಿ.ಜಿ.ಎಸ್ ಮತ್ತು ಪ್ರೊ .ಪೂಜಾಲಕ್ಷ್ಮಿ ವಿವಿಧ ಜವಾಬ್ಧಾರಿಗಳನ್ನು ನಿರ್ವಹಿಸಿದರು.








