ಸಮುದಾಯಕ್ಕೆ ಮತ್ತು ದೇಶಕ್ಕೆ ಪ್ರಾರ್ಥಿಸಿ- ದುಬೈನಲ್ಲಿ ಕನ್ನಡಿಗ ಹಜ್ ಯಾತ್ರಾರ್ಥಿಗಳಿಗೆ ಭಾವಪೂರ್ಣ ಬೀಳ್ಕೊಡುಗೆ ಸಮಾರಂಭದಲ್ಲಿ ಜನಾಬ್ ಟಿ ಎಂ ಶಹೀದ್ ತೆಕ್ಕಿಲ್ ಕರೆ…

ದುಬೈ: ಪವಿತ್ರ ಹಜ್ ಯಾತ್ರೆಗೆ ಹೊರಟ ಅನಿವಾಸಿ ಕನ್ನಡಿಗ ಬಂಧುಗಳಿಗೆ ಎಸ್ ಕೆ ಎಸ್ ಎಸ್ ಎಫ್ ಯುಎಇ ಕರ್ನಾಟಕ ರಾಷ್ಟ್ರೀಯ ಸಮಿತಿ ವತಿಯಿಂದ ದುಬೈ ತಮ್ರ್ ಇನ್ ಹೋಟೆಲಿನಲ್ಲಿ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಯಿತು
ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ಸರ್ಕಾರದ ಸಚಿವ ದರ್ಜೆಯ ಕನಿಷ್ಠ ವೇತನ ಸಲಹಾ ಮಂಡಲಿ ಅಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ಹಜ್ ಯಾತ್ರಾರ್ಥಿಗಳಿಗೆ ಭಾವುಕವಾಗಿ ಬೀಳ್ಕೊಟ್ಟು ನೀವು ಒಂಟಿಯಲ್ಲ , ತಾಯ್ನಾಡಿನ ಮಮತೆಯೊಃದಿಗೆ ಮಕ್ಕಾ ಮದೀನಾದಲ್ಲೂ ತಮ್ಮನ್ನು ಜವಾಬ್ದಾರಿಯುತವಾಗಿ ಯಾವುದೇ ವದಂತಿಗಳಿಗೆ ಕಿವಿಗೊದಬೇಡಿ ಎಂದು ಕಿವಿಮಾತು ಹೇಳಿದರು. ಯುದ್ಧ ಭೀತಿಯಿಂದ ಪಾರಾಗಲು ಸಮುದಾಯಕ್ಕೆ ದೇಶಕ್ಕೆ ವಿಶೇಷ ಪ್ರಾರ್ಥನೆ ಸಲ್ಲಿಸಲು ಅವರು ಕರೆ ನೀಡಿದರು. ಪಾಶ್ಚಿಮಾತ್ಯ ದೇಶ ಹಲವಾರು ಭಾರತೀಯ ಜನರಿಗೆ, ಉದ್ಯಮಕ್ಕೆ ಮತ್ತು ಕಾರ್ಮಿಕ ವರ್ಗಕ್ಕೆ ಅಭಯ ನೀಡಿದೆ ಎಂದು ಸ್ಮರಿಸಿದರು.
ರಾಜ್ಯ-ಕೇಂದ್ರ ಸರ್ಕಾರದ ಎಲ್ಲ ಸೌಲಭ್ಯಗಳನ್ನು ಮಧ್ಯವರ್ತಿಗಳ ಕಾಟ ಇಲ್ಲದೆ ನೇರವಾಗಿ ನಿಮ್ಮ ಕೈಗೆ ತಲುಪಿಸುತ್ತೇವೆ. ನಿಮ್ಮ ಜೊತೆ ನಾವಿದ್ದೇವೆ ಎಂದು ಭರವಸೆ ನೀಡಿದರು.
ಎಲ್ಲ ಹಜ್ ಯಾತ್ರಿಕರಿಗೂ ಶಾಲು ಹೊದಿಸಿ, ಸ್ಮರಣಿಕೆ, ಪ್ರಥಮ ಚಿಕಿತ್ಸಾ ಕಿಟ್ ನೀಡಿ ಗೌರವಿಸಲಾಯಿತು.
ಯುದ್ಧ ಪೀಡಿತ ಯುಏಇ ಯಲ್ಲಿ ಅಧಿಕೃತ ಪ್ರವಾಸದಲ್ಲಿರುವ ಕರ್ನಾಟಕ ಸರ್ಕಾರದ ಸಚಿವ ದರ್ಜೆಯ ಕನಿಷ್ಠ ವೇತನ ಸಲಹಾ ಮಂಡಲಿ ಅಧ್ಯಕ್ಷ ರಾದ ಸನ್ಮಾನ್ಯ ಜನಾಬ್ ಟಿ.ಎಂ. ಶಹೀದ್ ತೆಕ್ಕಿಲ್ ಅವರನ್ನ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಎಸ್ ಕೆ ಎಸ್ ಎಸ್ ಎಫ್ ಯುಎಇ ಕರ್ನಾಟಕ ಇದರ ಅಧ್ಯಕ್ಷರಾದ ಸಯ್ಯಿದ್ ಅಸ್ಗರ್ ಅಲಿ ತಂಙಳ್ ಕೋಲ್ಪೆ, ಹಾಜಿ ಮೊಯಿದಿನ್ ಕುಟ್ಟಿ ದಿಬ್ಬ , ಸಿರಾಜುದ್ದೀನ್ ಫೈಝಿ , ಅಬ್ದುಲ್ಲಾ ನಈಮಿ ಉಸ್ತಾದ್ , ಕೆಪಿಸಿಸಿ ಸಂಯೋಜಕರಾದ ಅನ್ವರ್ ಮಾಣಿಲ , ಶಂಸುದ್ದೀನ್ ಸೂರಲ್ಪಾಡಿ , ನವಾಜ್ ಬಿ ಸಿ ರೋಡ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.

whatsapp image 2026 04 20 at 6.23.20 pm

whatsapp image 2026 04 20 at 6.23.31 pm

whatsapp image 2026 04 20 at 6.23.28 pm

Related Articles

Back to top button