ಡಾ. ಗ್ರೀಷ್ಮಾ ವಿವೇಕ್ ಆಳ್ವ ಅವರಿಗೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಎಂಡಿ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್‌…

ಮಂಗಳೂರು: ಮೂಡಬಿದಿರೆ ಆಳ್ವಾಸ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್ ಕಾಲೇಜಿನ ಎಂ.ಡಿ. ಇನ್ ಕ್ಲಿನಿಕಲ್ ನ್ಯಾಚುರೋಪತಿ ವಿಭಾಗದ ವಿದ್ಯಾರ್ಥಿನಿ ಡಾ. ಗ್ರೀಷ್ಮಾ ವಿವೇಕ್ ಆಳ್ವ ಅವರಿಗೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ 2022 – 2025 ನೇ ಸಾಲಿನ ಸ್ನಾತಕೋತ್ತರ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್‌ ಲಭಿಸಿದೆ.
ಮೂಲತಃ ಪುತ್ತೂರು ತಾಲೂಕಿನ ಬಾಲ್ಯೊಟ್ಟು ಗುತ್ತು ಶ್ರೀಮತಿ ಶಶಿಕಲ ರೈ ಕುಕ್ಕುವಳ್ಳಿ ಮತ್ತು ದಿ| ಮಲಾರ್ ಬೀಡು ಗಣೇಶ್ ರೈ ಪಲ್ಲಮಜಲು ಅವರ ಪುತ್ರಿಯಾಗಿರುವ ಡಾ. ಗ್ರೀಷ್ಮಾ ಮೂಡಬಿದ್ರಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವರ ಸೊಸೆ; ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವರ ಧರ್ಮಪತ್ನಿ ಹಾಗೂ ಯಕ್ಷಗಾನ ವಿದ್ವಾಂಸ,ಸಾಹಿತಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರ ಸೋದರ ಸೊಸೆ.

ಬಹುಮುಖ ಪ್ರತಿಭಾವಂತೆ:
ವೃತ್ತಿಯಲ್ಲಿ ನ್ಯಾಚುರೋಪತಿ ವೈದ್ಯರಾಗಿರುವ ಡಾ.ಗ್ರೀಷ್ಮಾ ಪುತ್ತೂರು ತೆಂಕಿಲದ ವಿವೇಕಾನಂದ ಶಾಲೆಯಲ್ಲಿ ಆರಂಭಿಕ ಶಿಕ್ಷಣ ಪೂರೈಸಿ ಮೂಡಬಿದ್ರಿ ಆಳ್ವಾಸ್ ನ್ಯಾಚುರೋಪತಿ ಕಾಲೇಜಿನಲ್ಲಿ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್ ನಲ್ಲಿ ಪದವಿ ಪಡೆದಿದ್ದಾರೆ. ಪ್ರಸ್ತುತ ವೈದ್ಯಕೀಯ ವೃತ್ತಿಯೊಂದಿಗೆ ಆಳ್ವಾಸ್ ಫಾರ್ಮಸಿಯ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಲ್ಲಿ ಆಯುರ್ವೇದಿಕ್ ಔಷಧಿಗಳ ಉತ್ಪಾದನೆ ಮತ್ತು ಶೇಖರಣಾ ಕಾರ್ಯವನ್ನು ಸಮರ್ಥವಾಗಿ ನಿರ್ವಹಿಸುತ್ತಿರುವ ಗ್ರೀಷ್ಮಾ, ಆಳ್ವಾಸ್ ಮಹಿಳಾ ಸಂಘ ‘ಸಕ್ಷಮ’ದ ಸಂಚಾಲಕಿಯೂ ಆಗಿದ್ದಾರೆ ಆಕ್ಯುಪಂಕ್ಚರ್, ರೇಖಿ, ಕಪ್ಪಿಂಗ್ ಇತ್ಯಾದಿ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯ ಸಂವರ್ಧನ ವಿಭಾಗಗಳಲ್ಲೂ ಅವರು ಪರಿಣತರು. ಆಳ್ವಾಸ್ ಆನಂದಮಯ ಆರೋಗ್ಯಧಾಮದಲ್ಲಿ ನ್ಯಾಚುರೋಪತಿ ಆಧಾರಿತ ‘ಪ್ರಾಣ’ ಎಂಬ ನೈಸರ್ಗಿಕ ಚಿಕಿತ್ಸಾ ಘಟಕವನ್ನು ಸ್ಥಾಪಿಸಿ ಆಧುನಿಕ ಜೀವನ ಶೈಲಿಗೆ ಪೂರಕವಾದ ಚಿಕಿತ್ಸೆಗಳನ್ನು ನೀಡುತ್ತಿದ್ದಾರೆ. ‘ಆಳ್ವಾಸ್ ಝಂಬಾ ಸ್ಟುಡಿಯೋ’ ಮತ್ತು ‘ಆಳ್ವಾಸ್ ಅಕಾಡೆಮಿ ಆಫ್ ಮೇಕಪ್ ಆರ್ಟಿಸ್ಟ್ರಿ’ಗಳು ಅವರದೇ ಪರಿಕಲ್ಪನೆಯಲ್ಲಿ ರೂಪುಗೊಂಡು ಹೆಚ್ಚು ಜನಪ್ರಿಯವಾಗಿವೆ
ಓರ್ವ ಅತ್ಯುತ್ತಮ ಭರತನಾಟ್ಯ ಕಲಾವಿದೆಯಾಗಿರುವ ಗ್ರೀಷ್ಮಾ ಆಳ್ವ,ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಭಾಷಣ, ನಿರೂಪಣೆ ಹಾಗೂ ಆಪ್ತ ಸಮಾಲೋಚನೆಗಳಲ್ಲಿ ಗಮನ ಸೆಳೆಯುತ್ತಾರೆ. ಇತ್ತೀಚೆಗೆ ಕರ್ನಾಟಕ ಮಹಾವಿದ್ಯಾಲಯ ಶಿಕ್ಷಕರ ಸಂಘದಿಂದ ಪ್ರತಿಷ್ಠಿತ ‘ವೀರ ರಾಣಿ ಅಬ್ಬಕ್ಕ ಪ್ರಶಸ್ತಿ’ ಯಿಂದ ಪುರಸ್ಕೃತರಾಗಿರುವುದು ಅವರ ಸಾಧನೆಗೆ ಸಿಕ್ಕಿದ ಸೂಕ್ತ ಗೌರವವಾಗಿದೆ.

whatsapp image 2026 04 17 at 7.03.01 pm

whatsapp image 2026 04 17 at 7.03.02 pm

Related Articles

Back to top button