ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು – ಶಾಲಾ ಪುನರುಜ್ಜೀವನ ಕಾರ್ಯಕ್ರಮ…

ಪುತ್ತೂರು: ಮಕ್ಕಳ ಕಲಿಕೆಗೆ ಉತ್ತಮವಾದ ಮೂಲ ಸೌಕರ್ಯಗಳು ಮತ್ತು ಕಲಿಕಾ ಪರಿಸರಗಳು ಅಗತ್ಯ. ಸ್ವಚ್ಚ, ಆರೋಗ್ಯಕರ ಮತ್ತು ಪ್ರೇರಣದಾಯಕ ಶಾಲಾ ಪರಿಸರವು ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಡಳಿತ ಮಂಡಳಿಯ ಅಧ್ಯಕ್ಷ ವಿಶ್ವಾಸ್ ಶೆಣೈ ಹೇಳಿದರು.
ಅವರು ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಎನ್‍ಎಸ್‍ಎಸ್ ಮತ್ತು ಯೂತ್ ರೆಡ್ ಕ್ರಾಸ್ ವಿಭಾಗದ ವತಿಯಿಂದ ಕಾಲೇಜಿನ ಗ್ರಾಮ ವಿಕಾಸ ಯೋಜನೆಯನ್ವಯ ನಡೆದ ಕುಳ ಗ್ರಾಮದ ಓಜಾಲ ಸರ್ಕಾರಿ ಉನ್ನತ ಪ್ರಾಥಮಿಕ ಶಾಲೆಯ ಪುನರುಜ್ಜೀವನಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ಸಮಾಜ ಸೇವೆಯನ್ನು ಧ್ಯೇಯವನ್ನಾಗಿಸಿಕೊಂಡ ಎನ್‍ಎಸ್‍ಎಸ್ ಸ್ವಯಂಸೇವಕರ ಸೇವೆ ಅನುಕರಣೀಯ. ಕಲಿಕೆಯ ಜತೆಯಲ್ಲಿ ಸೇವಾ ಅನುಭವವನ್ನು ಪಡೆಯುವ ಇಂತಹ ಕಾರ್ಯಗಳು ಶ್ಲಾಘನೀಯ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ ಮಾತನಾಡಿ ವಿದ್ಯಾರ್ಥಿಗಳಿಗೆ ಎಳವೆಯಲ್ಲಿಯೇ ಸೂಕ್ತ ಮಾರ್ಗದರ್ಶನ ದೊರೆತರೆ ಅವರು ಸಾಮಾಜಿಕ ಜವಾಬ್ಧಾರಿಯುಳ್ಳ ನಾಗರಿಕರಾಗುವಲ್ಲಿ ಸಂದೇಹವೇ ಇಲ್ಲ. ಇಂತಹ ಕಾರ್ಯಗಳು ತಂಡದ ಭಾವನೆ, ನಾಯಕತ್ವ ಮತ್ತು ಜವಾಬ್ಧಾರಿಗಳನ್ನು ಬೆಳೆಸುತ್ತವೆ. ಕಾಲೇಜು ಇಂತಹ ಕಾರ್ಯಕ್ರಮಗಳನ್ನು ನಡೆಸುವುದಕ್ಕೆ ಸದಾ ಸಿದ್ದವಿದೆ ಎಂದರು.
ಓಜಾಲ ಶಾಲೆಯ ಮುಖ್ಯೋಪಾಧ್ಯಾಯ ಸಂಜೀವ ಅವರು ಮಾತನಾಡಿ ವಿವೇಕಾನಂದ ಸಂಸ್ಥೆಯು ಕುಳ ಗ್ರಾಮದಲ್ಲಿ ಅನೇಕ ಚಟುವಟಿಕೆಗಳನ್ನು ನಡೆಸುತ್ತಿದ್ದು, ಶಾಲಾ ಪುನರುಜ್ಜೀವನ ಎನ್ನುವ ಪರಿಕಲ್ಪನೆಯಲ್ಲಿ ನಮ್ಮ ಶಾಲೆಯಲ್ಲಿ ಅನೇಕ ಕೆಲಸಗಳನ್ನು ಮಾಡಿದ್ದಾರೆ. ಅವರಿಗೆ ನಾವು ಆಭಾರಿಗಳಾದ್ದೇವೆ ಎಂದರು.
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಗಣೇಶ್ ಮತ್ತು ಪೂರ್ವ ಅಧ್ಯಕ್ಷ ರಮೇಶ್ಚಂದ್ರ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ಗ್ರಾಮ ವಿಕಾಸ ಯೋಜನೆಯ ಸಂಯೋಜಕ ಪೆÇ್ರ.ಗುರುಪ್ರಸನ್ನ ಸ್ವಾಗತಿಸಿ, ಶ್ರದ್ಧಾ ವಂದಿಸಿದರು. ಸನ್ಮಯ ಕಾರ್ಯಕ್ರಮ ನಿರ್ವಹಿಸಿದರು.
ಎನ್‍ಎಸ್‍ಎಸ್ ವಿಭಾಗದ ಸಂಯೋಜಕ ಡಾ.ರಾಜೇಶ್ ಅವರ ಮಾರ್ಗದರ್ಶನದಲ್ಲಿ ಒಟ್ಟು 61 ಸ್ವಯಂಸೇವಕರು ಇದರಲ್ಲಿ ಪಾಲ್ಗೊಂಡರು. ಶಾಲೆಯ ಪರಿಸರ ಸ್ವಚ್ಚತೆ, ಆಟದ ಸಾಮಗ್ರಿಗಳಿಗೆ ಮತ್ತು ಹೊಸ ಗೋಡೆಗಳಿಗೆ ಬಣ್ಣ ಬಳಿಯುವುದು. ಶೌಚಾಲಯಗಳ ಸ್ವಚ್ಚತೆ ಮುಂತಾದ ಕಾರ್ಯಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದರು.

school rejuvenation 3

school rejuvenation 2

school rejuvenation 1

Related Articles