ಕೇರಳದ ರಾಜ್ಯದ ಭರ್ಜರಿ ಗೆಲುವು ಮತ್ತು ಕರ್ನಾಟಕದ ಉಪ ಚುನಾವಣೆ ಗೆಲುವು-ಟಿ ಎಂ ಶಾಹಿದ್ ತೆಕ್ಕಿಲ್ ಅತೀವ ಸಂತಸ…

ಸುಳ್ಯ :ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗು ಕರ್ನಾಟಕ ಸರಕಾರದ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷರು ಸಚಿವ ಸ್ಥಾನಮಾನ ಹೊಂದಿರುವ ಟಿ.ಎಂ. ಶಹೀದ್ ತೆಕ್ಕಿಲ್ ಅವರು ಇತ್ತೀಚೆಗೆ ಕೇರಳದ ಮಲಬಾರ್ ಭಾಗ ಸಹಿತ ಕೇರಳ ರಾಜ್ಯದ ವಿವಿಧ ಭಾಗದಲ್ಲಿ ಮತ್ತು ದಾವಣಗೆರೆಯಲ್ಲಿ ಒಂದು ತಿಂಗಳ ಕಾಲ ಬಿರುಸಿನ ಚುನಾವಣಾ ಪ್ರಚಾರ ನಡೆಸಿದ್ದರು.
​ಅವರು ಕೇರಳದ ಕಣ್ಣೂರು, ಕಾಸರಗೋಡು, ವಯನಾಡು ಮತ್ತು ಕೋಯಿಕ್ಕೋಡ್ ಜಿಲ್ಲೆ ಸೇರಿದಂತೆ ಕೇರಳ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಹಾಗೆಯೇ, ದಾವಣಗೆರೆಯಲ್ಲಿ ನಡೆದ ಉಪಚುನಾವಣೆಯಲ್ಲೂ ಹಗಲಿರುಳು ಎನ್ನದೇ ಸಕ್ರಿಯವಾಗಿ ಒಂಬತ್ತು ದಿವಸ ಪ್ರಚಾರ ನಡೆಸಿದ್ದು, ಈ ಎಲ್ಲಾ ಪ್ರಚಾರ ಕಾರ್ಯಗಳು ಯಶಸ್ಸಿಯಾಗಿದೆ. ಎಂದು ಅವರು ಹೇಳಿದ್ದಾರೆ.ಕೇರಳದ ಚುನಾವಣೆಯಲ್ಲಿ ಸ್ನೇಹಿತರಾದ ಹಲವಾರು ಹಿರಿಯ ನಾಯಕರು ಮತ್ತು ಕಾಂಗ್ರೆಸ್ ಮತ್ತು ಯು ಡಿ ಎಫ್ ನನ್ನ ಆತ್ಮೀಯ ಸ್ನೇಹಿತರು ಚುನಾವಣೆಯಲ್ಲಿ ಸ್ಪರ್ದಿಸಿ ಗೆದ್ದಿದ್ದಾರೆ. ಎಪ್ಪತೈದಕ್ಕೂ ಮಿಕ್ಕಿ ಯು ಡಿ ಎಫ್ ಶಾಸಕರು ಟಿ ಎಂ ಶಾಹಿದ್ ತೆಕ್ಕಿಲ್ ಅವರ ನೇರ ಸಂಪರ್ಕದಲ್ಲಿರುವ ವ್ಯಕ್ತಿಗಳಿಗಿದ್ದಾರೆ ಎಂಬುದು ವಿಶೇಷ.
​ಇದೇ ವೇಳೆ ಪಶ್ಚಿಮ ಬಂಗಾಳದ ರಾಜಕೀಯ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸಿದ ಅವರು, ಅಲ್ಲಿ ಮುಸ್ಲಿಂ ಮತಗಳ ವಿಭಜನೆಯಿಂದಾಗಿ ಬಿಜೆಪಿ ಗೆಲುವು ಸಾಧಿಸಿದೆ ಎಂದು ವಿಶ್ಲೇಷಿಸಿದ್ದಾರೆ. ಎಸ್ ಐ ಆರ್ ನಿಂದ ಅನೇಕ ಮುಸ್ಲಿಂ ಮತಗಳು ಮತ್ತು ಜಾತ್ಯತೀತ ಮತಗಳನ್ನು ಮತದಾರ ಪಟ್ಟಿಯಿಂದ ತೆಗೆಯಲಾಗಿದೆ , ಇದೇ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಗೆಲುವಿಗೆ ಕಾರಣವಾಯಿತು” ಚುನಾವಣಾ ಆಯುಕ್ತರು ಬಿಜೆಪಿ ಮದ್ಯಾವರ್ತಿಯಾಗಿ ಕೆಲಸ ಮಾಡಿದೆ ಎಂದು ಟಿ.ಎಂ. ಶಹೀದ್ ತೆಕ್ಕಿಲ್ ಅವರು ಗಂಭೀರವಾಗಿ ಆರೋಪಿಸಿದ್ದಾರೆ.

Related Articles

Back to top button