ವಿದ್ಯಾನಿಕೇತನ ವಿದ್ಯಾಸಂಸ್ಥೆ: ನೂತನ ಸಭಾಂಗಣ‌ ಉದ್ಘಾಟನೆ…

ಬಂಟ್ವಾಳ, ಜೂ.15:ಅಮ್ಟಾಡಿ ಬಂಟ್ವಾಳ ವಿದ್ಯಾನಿಕೇತನ ವಿದ್ಯಾಸಂಸ್ಥೆ ಇದರ ನೂತನ ಸಭಾಂಗಣವನ್ನು ವಿದ್ಯಾಸಂಸ್ಥೆಯ ಮೇನೇಜಿಂಗ್ ಟ್ರಸ್ಟಿ ಸ್ವರ್ಣೋದ್ಯಮಿ ಬಿ.ಸುರೇಶ ಬಾಳಿಗ ಉದ್ಘಾಟಿಸಿ ಶುಭಹಾರೈಸಿದರು.
ವಿದ್ಯಾರ್ಥಿಗಳ ಸಾಂಸ್ಕೃತಿಕ ಚಟುವಟಿಕೆಗಳ ಅನುಕೂಲಕ್ಕಾಗಿ ಸಭಾಂಗಣ ನಿರ್ಮಿಸಲಾಗಿದೆ. ವಿದ್ಯಾರ್ಥಿಗಳ ಸಾಂಸ್ಕೃತಿಕ ಪ್ರತಿಭೆಗಳ ಅನಾವರಣಕ್ಕೆ ಇದು ವೇದಿಕೆಯಾಗಲಿದೆ ಎಂದರು.
ಟ್ರಸ್ಟಿ ಬಿ.ಕಿರಣ್ ಎಸ್.ಬಾಳಿಗ ,ಕೋಶಾಧಿಕಾರಿ ಸಂಜಯ್ ಬಾಳಿಗ,ಸಲಹಾ ಸಮಿತಿ ಅಧ್ಯಕ್ಷ ವೆಂಕಟೇಶ ನಾಯಕ್ ,ಕಾನೂನು ಸಲಹಾ ತಜ್ಞ ವೆಂಕಟರಮಣ ಶೆಣೈ,ನ್ಯಾಯವಾದಿ ಶ್ರೀಧರ ಪೈ, ಶಾಲಾ ಸಂಚಾಲಕ ವಿವೇಕಾನಂದ ಕಾಮತ್ ವೇದಿಕೆಯಲಗಲ್ಲಿದ್ದು ಶುಭ ಹಾರೈಸಿ ಮಾತನಾಡಿದರು.
ಹಿರಿಯ ಶಿಕ್ಷಕರಾದ ರಾಧಾಕೃಷ್ಣ ಬಾಳಿಗ,ಜಯಾನಂದ ಪೆರಾಜೆ,ಮುಖ್ಯಶಿಕ್ಷಕಿ ಹೇಮಲತಾ ಶಾಲಾ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ವಿವರ ನೀಡಿದರು. ಮಾಂಟೆಸೋರಿ ಶಿಕ್ಷಣ ದ ಮುಖ್ಯಶಿಕ್ಷಕಿ ಸವಿತಾ ಕಿರಣ್ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

Related Articles