ಮಣಿನಾಲ್ಕೂರು ಸೇ. ಸ. ಬ್ಯಾಂಕ್ ನಿ. ಸರಪಾಡಿ ವತಿಯಿಂದ ಆಶಾ ಕಾರ್ಯಕರ್ತೆಯರ ಗೌರವ ಧನ ವಿತರಣೆ…

ಬಂಟ್ವಾಳ: ಮಣಿನಾಲ್ಕೂರು ಸೇವಾ ಸಹಕಾರಿ ಬ್ಯಾಂಕ್ ನಿಯಮಿತ ಸರಪಾಡಿ ಇದರ ವತಿಯಿಂದ ಆಶಾ ಕಾರ್ಯಕರ್ತೆಯರ ಗೌರವ ಧನವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಸಂಸ್ಥೆಯ ಕಚೇರಿಯಲ್ಲಿ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಆಶಾ ಕಾರ್ಯಕರ್ತೆಯರ ಸೇವೆಯನ್ನು ಗುರುತಿಸಿ ಮಣಿನಾಲ್ಕೂರು ಸೇವಾ ಸಹಕಾರಿ ಬ್ಯಾಂಕ್ ಅವರನ್ನು ಪ್ರೋತ್ಸಾಹಿಸುವುದಕ್ಕಾಗಿ ಗೌರವಧನ ನೀಡಿರುವುದು ಶ್ಲಾಘನೀಯ. ಕೊರೋನಾ ಮಹಾಮಾರಿಯ ವಿರುದ್ದ ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರು ತಮ್ಮ ಆರೋಗ್ಯವನ್ನೇ ಲೆಕ್ಕಿಸದೆ ನಮ್ಮೆಲ್ಲರ ಆರೋಗ್ಯದ ಬಗ್ಗೆ ಕಾಳಜಿವಹಿಸುತ್ತಿರುವುದು ಅಭಿನಂದನೀಯ. ಈ ಸಂಸ್ಥೆಯು ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಹೊಂದಿ ಸಮಾಜಮುಖಿ ಕಾರ್ಯವನ್ನು ಮುಂದುವರೆಸುವಂತಾಗಲಿ, ಪ್ರಧಾನಿ ಮೋದಿಯವರ ಇಚ್ಛೆಯಂತೆ ಸರಪಾಡಿ ಗ್ರಾಮವು ಸ್ವಾವಲಂಬಿಯಾಗಲಿ ಎಂದರು.
ಈ ಸಂದರ್ಭದಲ್ಲಿ ಬ್ಯಾಂಕ್‍ನ ಅಧ್ಯಕ್ಷರಾದ ಕೆ. ರಾದಕೃಷ್ಣ ಮಯ್ಯ,ಉಪಾಧ್ಯಕ್ಷರಾದ ವಿಶ್ವನಾಥ ನಾಯ್ಕ ಕಾನೆಕೋಡಿ, ನಿದೇರ್ಶಕರುಗಳಾದ ತಿಲಕ್ ಬಂಗೇರಾ,ದಯಾನಂದ ಶೆಟ್ಟಿ ಮುನ್ನಲಾಯಿ, ಜೋಕಿಂ ಪಿಂಟೋ, ನೀಶಾಂತ್ ಶೆಟ್ಟಿ,ನಾಣ್ಯಪ್ಪ ಪೂಜಾರಿ, ಕೃಷ್ಣ ಶಾಂತಿ, ಪ್ರೇಮ ವಿ ಆಳ್ವಾ, ವಸಂತಿ ಗೌಡ, ಕೆ.ಗೋಪಾಲ ಶೆಟ್ಟಿ ಉಪಸ್ಥಿತರಿದ್ದರು. ನಿರ್ದೇಶಕರಾದ ಧನಂಜಯ ಶೆಟ್ಟಿ ಸ್ವಾಗತಿಸಿದರು, ಮುಖ್ಯ ಕಾರ್ಯನಿವಾಹಣಾಧಿಕಾರಿ ಎಚ್.ಸುಧಾಕರ ಶೆಟ್ಟಿ ವಂದಿಸಿದರು.

WhatsApp Image 2020 06 09 At 15.25.27 1 300x200

Related Articles

Leave a Reply

Your email address will not be published. Required fields are marked *