ಎಸ್ ಎಸ್ ಎಲ್ ಸಿ – ಸುಳ್ಯ ಗ್ರೀನ್ ವ್ಯೂ ಶಾಲೆಗೆ ಶೇಕಡಾ 100 ಫಲಿತಾಂಶ…
10 ಉನ್ನತ ಶ್ರೇಣಿ, 14 ಪ್ರಥಮ ಶ್ರೇಣಿ, ಗರಿಷ್ಠ 97%...
ಸುಳ್ಯ : ಅನ್ಸಾರಿಯಾ ಎಜುಕೇಶನ್ ಸೆಂಟರ್ ಆಡಳಿತಕ್ಕೊಳಪಟ್ಟ ಸುಳ್ಯ ಗ್ರೀನ್ ವ್ಯೂ ಆಂಗ್ಲ ಮಾಧ್ಯಮ ಶಾಲೆ 12 ಬಾರಿ ಎಸ್ ಎಸ್ ಎಲ್ ಸಿ ಯಲ್ಲಿ ಶೇಕಡಾ 100 ಫಲಿತಾಂಶ ದಾಖಲಿಸಿದೆ.
ಪರೀಕ್ಷೆ ಗೆ ಹಾಜರಾದ 24 ವಿದ್ಯಾರ್ಥಿಗಳ ಪೈಕಿ 10 ಡಿಸ್ಟಿಂಕ್ಷನ್, 14 ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣ ಗೊಂಡಿರುವುದು ಈ ಬಾರಿಯ ವಿಶೇಷತೆ.
ಆಸಿಯ ಸನ 97% ( 607) ಅಂಕ ಗಳೊಂದಿಗೆ ಪ್ರಥಮ ಸ್ಥಾನಿಯಾದರೆ, ರಿಝ ಟಿ. ಎಸ್. 603 ಅಂಕಗಳೊಂದಿಗೆ ದ್ವಿತೀಯ ಸ್ಥಾನಿಯಾಗಿರುತ್ತಾರೆ.
ಶಾಲಾ ಸಂಚಾಲಕ, ಸುಳ್ಯ ಸೂಡ ಅಧ್ಯಕ್ಷ ಕೆ. ಎಂ. ಮುಸ್ತಫ ಅಭಿನಂದನೆ ಸಲ್ಲಿಸಿರುತ್ತಾರೆ.





