ಬುಧವಾರ – ದ.ಕ 208 ,ಉಡುಪಿ 173 ಹಾಗೂ ರಾಜ್ಯದಲ್ಲಿ 5503 ಕೊರೊನ ಪಾಸಿಟಿವ್ ಪತ್ತೆ…

ಮಂಗಳೂರು: ಇಂದು(ಬುಧವಾರ) ದ.ಕ ಜಿಲ್ಲೆಯಲ್ಲಿ 208 ,ಉಡುಪಿ ಜಿಲ್ಲೆಯಲ್ಲಿ 173 ಹಾಗೂ ರಾಜ್ಯದಲ್ಲಿ 5503 ಕೊರೊನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.
ದ.ಕ ಜಿಲ್ಲೆಯಲ್ಲಿ ಇಂದು 208 ಹೊಸ ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.ಈ ಮೂಲಕ ಸೋಂಕಿತರ ಸಂಖ್ಯೆ 5311ಕ್ಕೆ ಏರಿಕೆಯಾಗಿದೆ.65 ಮಂದಿಯಲ್ಲಿ ಪ್ರಾಥಮಿಕ ಸಂಪರ್ಕದಿಂದ , 73 ಮಂದಿಯಲ್ಲಿ ILI ಪ್ರಕರಣ ದೃಢಪಟ್ಟಿದೆ. 12 ಮಂದಿಯಲ್ಲಿ SARI ಪ್ರಕರಣ ಪತ್ತೆಯಾಗಿದ್ದು, 58 ಮಂದಿಯ ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ. ಜಿಲ್ಲೆಯಲ್ಲಿ ಇಂದು 7 ಮಂದಿ ಕೊರೊನದಿಂದಾಗಿ ಮೃತಪಟ್ಟಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಇಂದು 173 ಹೊಸ ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಆ ಮೂಲಕ ಸೋಂಕಿತರ ಸಂಖ್ಯೆ 3895 ಕ್ಕೆ ಏರಿಕೆಯಾಗಿದೆ.ಜಿಲ್ಲೆಯಲ್ಲಿ ಈವರೆಗೆ ಕೊರೊನಾದಿಂದ 25 ಮಂದಿ ಸಾವನ್ನಪ್ಪಿದ್ದು, ಸದ್ಯ 1547 ಸಕ್ರಿಯ ಪ್ರಕರಣಗಳಿವೆ.
ಇಂದು ರಾಜ್ಯದಲ್ಲಿ 5503 ಹೊಸ ಪ್ರಕರಣಗಳು ವರದಿಯಾಗಿದ್ದು, 92 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 1,12,504ಕ್ಕೇರಿಕೆಯಾಗಿದೆ.ಇಂದು ಬೆಂಗಳೂರು ನಗರದಲ್ಲಿ 2,270 ಮಂದಿ ಸೋಂಕಿತರು ಪತ್ತೆಯಾಗಿದ್ದು, 30 ಮಂದಿ ಮೃತಪಟ್ಟಿದ್ದಾರೆ.
ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ 49 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಈ ಪೈಕಿ 34 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ. 15 ಮಂದಿ ವಿದೇಶದಿಂದ ಬಂದವರಾಗಿದ್ದಾರೆ.ಕಾಸರಗೋಡು 6, ನೀಲೇಶ್ವರ 6, ತ್ರಿಕ್ಕರಿಪುರ 5, ಪುಲ್ಲೂರು ಪೆರಿಯ, ಕಿನಾನೂರು ಕರಿಂದಳ ತಲಾ 2, ಚೆಮ್ನಾಡ್, ಚೆಂಗಳ, ಪೈವಳಿಕೆ, ಮಂಜೇಶ್ವರ, ಕಾಞ0ಗಾಡ್, ಮೊಗ್ರಾಲ್ ಪುತ್ತೂರು, ಕುತ್ತಿಕೋಲು, ಮಧೂರು, ಬದಿಯಡ್ಕ, ಕಾರಡ್ಕ, ಅಜನೂರು, ಪಳ್ಳಿಕೆರೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತಲಾ ಒಬ್ಬರಿಗೆ ಸೋಂಕು ಪತ್ತೆಯಾಗಿದೆ.

IMG 20200729 WA0008 211x300

Related Articles

Leave a Reply

Your email address will not be published. Required fields are marked *