ಪುತ್ತೂರು -ಪಕ್ಕದ ಮನೆಯ ಆಂಟಿಗೆ ಕಿಸ್ ಕೊಡಲು ಹೋಗಿ ಕೊರೋನಾ ತಂದುಕೊಂಡ ಮುದುಕ…

ಪುತ್ತೂರು: ರಸಿಕ ಮುದುಕನೊಬ್ಬ ಪಕ್ಕದ ಬಾಡಿಗೆ ಮನೆಯಲ್ಲಿದ್ದ ಮಹಿಳೆಗೆ ಕಿಸ್ ಕೊಡಲು ಹೋಗಿ ಕೊರೋನಾ ಮೈಮೇಲೆ ಎಳೆದುಕೊಂಡ ಘಟನೆ ಪುತ್ತೂರಿನಲ್ಲಿ ವರದಿಯಾಗಿದೆ.
ಒಳಮೊಗ್ರು ಗ್ರಾಮದ ಪಕ್ಕದ ಗ್ರಾಮದ ರಸಿಕ ಮಹಾಶಯನಾದ ಈ ಮುದುಕ ಊರಿನ ಜನರೆಲ್ಲ ಮೊದಲೇ ಈ ವಿಷಯದಲ್ಲಿ ತುಂಬಾ ಗಲಾಟೆ ಮಾಡಿದ್ರೂ ತನ್ನ ಚಾಳಿ ಬಿಟ್ಟಿರಲಿಲ್ಲ. ಲಾಕ್ ಡೌನ್ ನಿಂದಾಗಿ ಮನೆಯೊಳಗೇ ಇರಬೇಕಾದಂತಹ ಸಂದರ್ಭದಲ್ಲಿ ಈ ಮುದುಕ ಸಾಮಾಜಿಕ ಅಂತರವನ್ನು ಉಲ್ಲಂಘಿಸಿ ಹೊಸದಾಗಿ ಬಾಡಿಗೆಗೆ ಬಂದ ಆಂಟಿಗೆ ಕಿಸ್ ಕೊಡಲು ಹೋಗಿದ್ದಾನೆ ಎನ್ನಲಾಗಿದೆ.
ಮಹಿಳೆಗೆ ಕೊರೋನಾ ಪಾಸಿಟಿವ್ ಇದ್ದಿದ್ದರಿಂದ ಈಗ ಕೊರೋನಾ ಮುದುಕನ ಮೇಲೂ ಧಾಳಿ ಮಾಡಿದೆ. ಸದ್ಯ ಈತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.