ಮಂಜೇಶ್ವರ – ಒಂದೇ ಕುಟುಂಬದ ನಾಲ್ವರ ಕೊಲೆ…

ಮಂಜೇಶ್ವರ: ಮಂಜೇಶ್ವರ ತಾಲೂಕಿನ ಪೈವಳಿಕೆ ಗ್ರಾಮದ ಬಾಯಾರು ಕನಿಯಾಲ ಎಂಬಲ್ಲಿ ಒಂದೇ ಕುಟುಂಬದ ನಾಲ್ವರನ್ನು ಕೊಲೆ ಮಾಡಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.

ಕೊಲೆ ಆರೋಪಿಯನ್ನು ಸುದೆಂಬಲ ಉದಯ (40) ಎಂದು ಗುರುತಿಸಲಾಗಿದ್ದು, ಈತನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.ಕೊಲೆಗೀಡಾದವರನ್ನು ಆರೋಪಿ ಉದಯನ ಸೋದರ ಮಾವಂದಿರಾದ ಸದಾಶಿವ (54), ವಿಠಲ (52), ಬಾಬು (50), ಚಿಕ್ಕಮ್ಮ ರೇವತಿ (58) ಎಂದು ತಿಳಿದು ಬಂದಿದೆ. ಉದಯ ಮಾನಸಿಕ ಅಸ್ವಸ್ಥನಾಗಿದ್ದು ದಾರಿಗೆ ಸಂಬಂಧಿಸಿದ ಕೌಟುಂಬಿಕ ವಿವಾದವೇ ಕೊಲೆಗೆ ಕಾರಣ ಎಂಬ ಮಾಹಿತಿ ಲಭಿಸಿದೆ. ಮಂಜೇಶ್ವರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

 

Image 1 300x135

Related Articles

Leave a Reply

Your email address will not be published. Required fields are marked *