ಅಮ್ಟೂರು ಗ್ರಾಮದ ವಿವಿಧ ಕಾಮಗಾರಿಗಳ ಉದ್ಘಾಟನಾ ಸಮಾರಂಭ…

ಬಂಟ್ವಾಳ: ಅಮ್ಟೂರು ಗ್ರಾಮದ ವಿವಿಧ ಕಾಮಗಾರಿಗಳ ಉದ್ಘಾಟನಾ ಸಮಾರಂಭ ಆ. 31 ರಂದು ನಡೆಯಿತು.
ಶಾಂತಿ ಪಾಲಿಕೆ ಪರಿಶಿಷ್ಟ ಜಾತಿ ಕಾಲೊನಿಯ ಕಾಂಕ್ರಿಟೀಕರಣ ರಸ್ತೆ ಹಾಗೂ ಅಮ್ಟೂರು ಗ್ರಾಮದ ಪೊಯ್ಯೆಕಂಡ ಕೃಷ್ಣಾಪುರ ಹೋಗುವ ರಸ್ತೆ ಹಾಗೂ ಅಮ್ಟೂರು ಗ್ರಾಮದ ಜಂಕ್ಷನ್ನಲ್ಲಿ ಹೈಮಾಸ್ಟ್ ದೀಪವನ್ನು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕ ಉಳಿಪಾಡಿಗುತ್ತು ರಾಜೇಶ್ ನಾಯ್ಕ್ ಲೋಕಾರ್ಪಣೆ ಮಾಡಿದರು. ಮುಂದಿನ ದಿನಗಳಲ್ಲಿ ಕೃಷ್ಣಾಪುರ ಪರಿಶಿಷ್ಟ ಜಾತಿ ಕಾಲೊನಿಯ ಕಿಂಡಿ ಅಣೆಕಟ್ಟನ್ನು, ಸುಮಾರು ಒಂದು ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ವೆಂಟೆಡ್ ಡ್ಯಾಂ ಮುಂದಿನ ದಿನಗಳಲ್ಲಿ ಲೋಕಾರ್ಪಣೆಯಾಗಲಿದೆ ಅವರು ತಿಳಿಸಿದರು.
ಈ ಒಂದು ಸಂದರ್ಭದಲ್ಲಿ ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಕಮಲಾಕ್ಷಿ ಪೂಜಾರಿ, ತಾಲ್ಲೂಕು ಪಂಚಾಯಿತಿ ಸದಸ್ಯ ಮಹಾಬಲ ಆಳ್ವ, ಗೋಳ್ತಮಜಲು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರು ಮುಹಮ್ಮದ್ ಮುಸ್ತಪಾ, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಕಾರ್ಯದರ್ಶಿ ಮಾಣಿ ಗಣೇಶ್ ರೈ ಹಾಗೂ ಗೋಳ್ತಮಜಲು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರಮಾನಾಥ ರಾಯಿ, ಪ್ರಧಾನ ಕಾರ್ಯದರ್ಶಿ ಯಶೋಧರ ಕರ್ಬೆಟ್ಟು, ಮಹಿಳಾ ಮೋರ್ಚಾದ ಉಪಾಧ್ಯಕ್ಷರಾದ ಲಕ್ಷ್ಮೀ ಪ್ರಭು, ಗೋಳ್ತಮಜಲು ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಗೋಪಾಲ್ ಕೃಷ್ಣ ಪೂವಳ, ಗೋಪಾಲ್ ಪೂಜಾರಿ, ಜಯಂತ ಗೌಡ, ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕ ಮಹಾಬಲ ಸಾಲಿಯಾನ್, ಹಾಗೂ ಹಿರಿಯರಾದ ವಿಠಲ ಪ್ರಭು ಹಾಗೂ ಅಮ್ಟೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಶರತ್ ಅಮ್ಟೂರು, ಭಾರತೀಯ ಜನತಾ ಪಾರ್ಟಿಯ ಅಮ್ಟೂರು ಗ್ರಾಮದ 182 ಬೂತ್ ಸಮಿತಿಯ ಅಧ್ಯಕ್ಷರಾದ ಪ್ರಭಾಕರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಶೆಟ್ಟಿಗಾರ್ ,ಕಾರ್ಯದರ್ಶಿ ಪುರುಷೋತ್ತಮ ಪೂಜಾರಿ ಶಾಂತಿ ಪಳಿಕೆ, ಪಕ್ಷದ ಪ್ರಮುಖರಾದ ವಿಶಾಲ ಡಿ ಶೆಟ್ಟಿ ಬಾಳಿಕೆ, ಕಾಂತಪ್ಪ ಶೆಟ್ಟಿ ಬಾಳಿಕೆ, ರಾಜೇಶ್ ಶಾಂತಿ ಪಾಲಿಕೆ, ಪುರುಷೋತ್ತಮ್ ಟೈಲರ್, ಹಿರಿಯರಾದ ವಿಠಲ್ ಪ್ರಭು, ದೇವಕಿ ಪೂಜಾರಿ, ದಿವಾಕರ ಪೂಜಾರಿ, ವಿಖ್ಯಾತ್ ಶೆಟ್ಟಿ ಬಾಳಿಕೆ, ಹರೀಶ್ ಬಟ್ಟೆ ಹಿತ್ಲು, ವಸಂತ ಬಟ್ಟೆ ಹಿತ್ಲು, ರತಿನ್ ಪೂಜಾರಿ, ಹಾಗೂ ಪಕ್ಷದ ಪ್ರಮುಖರು ಬೂತ್ ಸಮಿತಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.
ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ದಿನೇಶ್ ಅಮ್ಟೂರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಬೂತ್ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ಧನ್ಯವಾದ ಮಾಡಿದರು.

2066338c 8cf6 4e6d 9c11 C740d32ea98c 300x200

15ef20d8 4468 40c3 8561 2536e20ac603 300x200

Related Articles

Leave a Reply

Your email address will not be published. Required fields are marked *